ಹೊಸಪೇಟೆಯಲ್ಲಿ ಸತತ ಮಳೆ: ಜನ ಜೀವನ ಅಸ್ತವ್ಯಸ್ತ

IMG-20220930-WA0057.jpg
Published on

ಹೊಸಪೇಟೆ: ಕಳೆದ ರಾತ್ರಿಇಡೀ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸಗೊಂಡಿದೆ.
ಗುರುವಾರ ರಾತ್ರಿ ೯ ಗಂಟೆ ಸುಮಾರಿಗೆ ಆರಂಭಗೊಂಡ ಮಳೆ ಬೆಳಗ್ಗೆ ೬ ಗಂಟೆ ವರೆಗೆ ಸತತವಾಗಿ ಸುರಿದಿದೆ. ನಗರದ ರಾಜಕಾಲುವೆಗಳು ಉಕ್ಕಿ ಹರಿದಿವೆ. ಪಟೇಲ್ ನಗರದ ಕೊನೆ ಭಾಗ, ಶ್ರೀ ವೇಣುಗೋಪಾಲ ದೇವಸ್ಥಾನದ ಹಿಂಭಾಗ, ಇಂದಿರಾನಗರ, ಶಾಂತಿ ಸಾಗರ, ಬಸವೇಶ್ವರ ಬಡಾವಣೆ, ಗಾಂಧಿ ನಗರ, ಸಿದ್ದಲಿಂಗಪ್ಪ ಚೌಕಿ, ರಾಣಿ ಪೇಟೆ, ಹಂಪಿ ರೋಡ್, ಅರವಿಂದ ನಗರ ರಾಜಕಾಲುವೆ ಅಕ್ಕಪಕ್ಕದ ಒಣಿಯ ಮನೆಗಳಿಗೆ ನೀರು ನುಗ್ಗಿ, ಜನರ ನಿದ್ದೆ ಗೆಡಿಸಿದೆ.
ತಡ ರಾತ್ರಿ ಮನೆಗಳಿಗೆ ನೀರು ಹರಿದು ಬಂದಿದ್ದರಿಂದ ಬಕೇಟ್, ಮಗ್ ಹಾಗೂ ವಿವಿಧ ಪಾತ್ರೆಗಳನ್ನು ಬಳಿಸಿ ನೀರು ಹೊರ ಚೆಲ್ಲಿದರು. ಆಹಾರ ಸಾಮಗ್ರಿ, ದಿನ ಬಳಕೆ ವಸ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು.
ಬಳಗ್ಗೆ ಕಾರ್ಯಾಚರಣೆಗಿಳಿದ ನಗರಸಭೆ ಸಿಬ್ಬಂದಿ ಜೆಸಿಬಿಗಳ ಮೂಲಕ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net