

ತರೀಕೆರೆ: ಅಜ್ಜಂಪುರ ತಾಲೂಕಿನ ಹರಳಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದೆ.
ಶಿಂಗೇನಹಳ್ಳಿ, ಕಣಿವೇಹಳ್ಳಿ, ಭಕ್ತನಕಟ್ಟೆ, ದಾಸರಹಟ್ಟಿ ಮತ್ತು ಹರಳಹಳ್ಳಿಗಳಲ್ಲಿ ಗುರುವಾರ ಸಂಜೆ 4.45 ಗಂಟೆ ಹೊತ್ತಿಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಒಂದೂವರೆ ತಾಸಿಗೂ ಹೆಚ್ಚು ಸಮಯ ಸುರಿಯಿತು. ಮಳೆ ಅಬ್ಬರಕ್ಕೆ ಚೆಕ್ ಡ್ಯಾಂಗಳು ಒಡೆದು ಹರಳಹಳ್ಳಿ ಹೊಂಗೇಹಳ್ಳಕ್ಕೆ ಭಾರಿ ಪ್ರಮಾಣದ ನೀರು ನುಗ್ಗಿದೆ. ಹರಳಹಳ್ಳಿ ಕೆರೆ ಸಂಪೂರ್ಣ ತುಂಬಿ ಜೀವಕಳೆ ಪಡೆದುಕೊಂಡಿದೆ.