ಧಾರವಾಡದಲ್ಲಿ ಧಾರಾಕಾರ ಮಳೆ

23 Dwd 7 Haveripeth
Published on

ಧಾರವಾಡ: ನಗರದಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.
ಸಂಜೆವರೆಗೂ ಬಿಸಿಲಿನ ವಾತಾವರಣವಿದ್ದು, 5 ಗಂಟೆ ಸುಮಾರಿಗೆ ಏಕಾಏಕಿ ಮಳೆಯ ಆಗಮನವಾಯಿತು. ಎಂದಿನAತೆ ಎನ್‌ಟಿಟಿಎಫ್ ಬಳಿಯ ಗಣೇಶ ದೇವಸ್ಥಾನ ಎದುರು ಜಲಾವೃತವಾಗಿತ್ತು. ಚರಂಡಿ ನೀರು ರಸ್ತೆ ಮೇಲೆ ಸಾಗಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.
ಮತ್ತೊAದೆಡೆ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಅಕ್ಕಿಪೇಟೆ ಕೆಲಕಾಲ ಜಲಾವೃತವಾಗಿತ್ತು. ಹಾವೇರಿಪೇಟೆಯಲ್ಲೂ ಚರಂಡಿ ನೀರು ರಸ್ತೆ ಮೇಲೆ ಜಮೆಯಾಗಿ ನಿವಾಸಿಗಳು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net