ಧಾರವಾಡದಲ್ಲಿ ಆಲಿಕಲ್ಲು ಮಳೆ

18 Dwd 11
Published on

ಧಾರವಾಡ: ನಗರದಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಮಳೆಯೊಂದಿಗೆ ಆಲಿಕಲ್ಲು ಸುರಿದವು. ಬೇಸಿಗೆ ಆರಂಭದೊAದಿಗೆ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಧರೆಗೆ ಮಳೆ ತಂಪನ್ನೆರೆಯಿತು.
ಮಳೆಯಾಗುತ್ತಲೆ ರಸ್ತೆಗಳು ಜಲಾವೃತಗೊಳ್ಳುವುದು ಮತ್ತೆ ಮುಂದುವರಿಯಿತು. ನಗರದ ಎನ್‌ಟಿಟಿಎಫ್ ಬಳಿಯ ದೈವಜ್ಞ ಕಲ್ಯಾಣ ಮಂಟಪ ಎದುರು ರಸ್ತೆ ಜಲಾವೃತವಾಗಿತ್ತು. ಮಳೆ ನೀರು ಸರಾಗವಾಗಿ ಸಾಗಲು ಅವಕಾಶವಿಲ್ಲದೆ ಗಂಟೆಗಟ್ಟಲೆ ರಸ್ತೆ ಮೇಲೆ ನಿಂತಿತ್ತು. ಇದರಿಂದ ವಾಹನ ಸವಾರರು ಕೆಲಕಾಲ ಪರದಾಡಬೇಕಾಯಿತು. ಗ್ರಾಮೀಣ ಪ್ರದೇಶದ ಕೆಲವೆಡೆ ಉತ್ತಮ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net