ಬೆಟ್ಟದಪುರ ವ್ಯಾಪ್ತಿಯಲ್ಲಿ ಜಡಿ ಮಳೆ

15BTP01
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ತಂಬಾಕು ಎಲೆಗಳನ್ನು ಜೋಡಣೆ ಕಾರ್ಯದಲ್ಲಿ ತೊಡಗಿರುವ ಕೃಷಿಕರು.
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ವ್ಯಾಪ್ತಿಯಲ್ಲಿ ಭಾನುವಾರದಿಂದ ಜಡಿ ಮಳೆ ಆರಂಭಗೊಂಡಿದ್ದು, ನಿರಂತರವಾಗಿ ಎಡೆಬಿಡದೆ ಸುರಿಯುತ್ತಿದೆ.

ಈ ಭಾಗದಲ್ಲಿ ಈಗಾಗಲೇ ತಂಬಾಕು ಎಲೆಗಳ ಹದ ಮಾಡುವ ಪ್ರಕ್ರಿಯೆ ಆರಂಭಗೊಂಡು, ಎಲ್ಲೆಡೆ ಬಿರುಸಿನ ಕೃಷಿ ಚಟುವಟಿಕೆ ನಡೆಯುತ್ತಿದೆ. ಅಲ್ಲದೆ ಕೂಲಿ ಕೆಲಸಕ್ಕೆ ಆಗಮಿಸುವಂತಹ ಕೃಷಿ ಕಾರ್ಮಿಕರಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಕೂಲಿಯೂ ಏರಿಕೆಯಾಗಿದೆ. ಒಂದು ಕಡೆ ಹೊಲದಲ್ಲಿ ನಾಟಿ ಮಾಡಿರುವಂತಹ ತಂಬಾಕು ಗಿಡಗಳಿಂದ ಎಲೆಗಳನ್ನು ಮುರಿದು ಜಮೀನಿನಲ್ಲಿಯೇ ಅಥವಾ ರಸ್ತೆ ಬದಿಯಲ್ಲಿ ತಂಬಾಕು ಎಲೆಗಳನ್ನು ಜೋಡಿಸುವ ಪ್ರಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಈಗಾಗಲೇ ಬ್ಯಾರನ್ ಮನೆಯಲ್ಲಿ ತಂಬಾಕು ಎಲೆಗಳ ಹದ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಹೊಗೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಹಲವು ಗ್ರಾಮಗಳು ಹೊಗೆಯಿಂದ ಸಂಪೂರ್ಣವಾಗಿ ಕೂಡಿ ಹೋಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗ್ರಾಮಗಳಲ್ಲಿ ಇರುವಂತಹ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net