

ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನ ಭರ್ಜರಿ ಮಳೆಯಾಗಿದೆ.
ಶನಿವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಆರಂಭಗೊಂಡ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಗುರುವಾರವೂ ಮಳೆಯಾಗಿತ್ತು. ಒಂದು ದಿನ ಬಿಟ್ಟು ಪುನಃ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ.
ಸೀಗೋಡು, ಹೇರೂರು, ಇಟ್ಟಿಗೆ ಆದರ್ಶನಗರ, ಶಿವನಗರ, ಮಸೀದಿಕೆರೆ, ರಂಭಾಪುರಿ ಪೀಠ, ಮೆಣಸುಕೊಡಿಗೆ, ಕುಂಬತ್ತಿ, ತಲವಾನೆ, ಮೇಲ್ಪಾಲ್, ಅರಳೀಕೊಪ್ಪ, ಸರಗಳಲೆ, ಸೀಕೆ, ವಾಟುಕೊಡಿಗೆ, ಮುದುಗುಣಿ, ಅಕ್ಷರನಗರ ಮುಂತಾದ ಕಡೆಗಳಲ್ಲಿಯೂ ಉತ್ತಮವಾಗಿ ಹದವಾದ ಮಳೆಯಾಗಿದೆ.