ಹನೂರಿನಲ್ಲಿ ಅರ್ಧ ತಾಸು ಜೋರು ಮಳೆ

01 HANUR 4
ಹನೂರು ಸಮೀಪದ ಮಂಗಲ ಗ್ರಾಮದಲ್ಲಿ ಬಾನುವಾರ ಅರ್ಧ ತಾಸು ಜೋರು ಮಳೆ ಸುರಿಯಿತು.
Published on

ಹನೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡ ಮಾರುತದ ಪರಿಣಾಮ ಭಾನುವಾರ ತಾಲೂಕಿನಾದ್ಯಂತ ಇಡೀ ದಿನ ಆಗಾಗ್ಗೆ ತುಂತುರು ಮಳೆ ಸುರಿಯಿತು. ಇದರಿಂದ ಜನರ ಸಹಜ ಜೀವನಕ್ಕೆ ಅಡಚಣೆಯಾಯಿತು.

ಚಂಡಮಾರುತದ ಪರಿನಾಮವಾಗಿ ತಾಲೂಕಿನಲ್ಲಿ ಬೆಳಗ್ಗೆಯಿಂದ ಮೋಡದ ವಾತಾವರಣವಿತ್ತು. ಬೆಳಗ್ಗೆ 7ರ ಬಳಿಕ ಸಂಜೆಯವರೆಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಾಗ್ಗೆ ತುಂತುರು ಮಳೆ ಸುರಿಯುತ್ತಲೇ ಇತ್ತು. ಕೆಲವೆಡೆ ಜೋರು ಮಳೆಯಾಗುತ್ತಿತ್ತು. ಇದರಿಂದ ಹನೂರು ತಾಲೂಕು ಮಿನಿ ಊಟಿಯಂತೆ ಬಾಸವಾಯಿತು. ಈ ಜಿಟಿಜಿಟಿ ಮಳೆಯಿಂದಾಗಿ ಜಮೀನುಗಳಿಗೆ ಕೂಲಿ ಕೆಲಸಕ್ಕೆ ತೆರಳುವ ಮಹಿಳಾ ಕೂಲಿ ಕಾರ್ಮಿಕರು ಮನೆಯಲ್ಲಿಯೇ ಉಳಿಯುಂತಾಯಿತು. ಎಂದಿನಂತೆ ಕೆಲಸ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಆಗಮಿಸುತ್ತಿದ್ದ ಜನರ ಸಂಖ್ಯೆ ವಿರಳವಾಗಿತ್ತು. ಪರಿಣಾಮ ವ್ಯಾಪಾರ ವಹಿವಾಟು ಕ್ಷೀಣವಾಗಿತ್ತು. ಬಹುತೇಕ ಬೀದಿಬದಿ ವ್ಯಾಪಾರಿಗಳು ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರು. ಎಂದಿನಂತೆ ಬೈಕ್‌ನಲ್ಲಿ ತೆರಳುತ್ತಿದ್ದ ಬಹುತೇಕರು ಬಸ್‌ಅನ್ನು ಅವಲಂಬಿಸಿದರು. ಇನ್ನು ವಿಪರೀತ ಚಳಿಯಿಂದಾಗಿ ಜನರು ಸ್ವೆಟರ್ ಹಾಗೂ ಬೆಚ್ಚನೆಯ ಉಡುಪನ್ನು ಧರಿಸುವಂತಾಯಿತು. ಟೀ, ಕಾಫಿ ಹಾಗೂ ಕುರುಕಲು ತಿಂಡಿ-ತಿನಿಸುಗಳ ಮೊರೆ ಹೋದರು. ಸದ್ಯ ರಜೆ ಇದ್ದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಮಳೆಯ ನಡುವೆಯೂ ದೇಗುಲಗಳಿಗೆ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net