ಚರಂಡಿ ಅವ್ಯವಸ್ಥೆಯಿಂದ ಕೃತಕ ನೆರೆ

padubailu
ಕೃತಕ ನೆರೆಯಿಂದ ಪಡುಬೈಲು ನಿವಾಸಿ ಹೂವಯ್ಯ ಶೆಟ್ಟಿ ಎಂಬುವರ ಮನೆ ಅಂಗಳದಲ್ಲಿ ನೀರು ತುಂಬಿರುವುದು.
Published on

ಮೂಲ್ಕಿ: ನಗರ ಪಂಚಾಯಿತಿ ವ್ಯಾಪ್ತಿಯ ಪಡುಬೈಲು ಬಳಿ ಚರಂಡಿ ಅವ್ಯವಸ್ಥೆಯಿಂದ ಕೃತಕ ನೆರೆ ಉಂಟಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಮನೆ ಮಂದಿ ನಿದ್ರೆ ಇಲ್ಲದೆ ರಾತ್ರಿ ಕಳೆಯುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಬಳಿ ಬಂಟರ ಭವನ ನಿರ್ಮಾಣ ಸೈಟ್ ಮಾಡುವಾಗ ಮಳೆನೀರು ಚರಂಡಿ ಮುಚ್ಚಿದ್ದು, ಕೃತಕ ನೆರೆಗೆ ಕಾರಣವಾಗಿದ್ದು, ನಗರ ಪಂಚಾಯಿತಿ ಅನುಮತಿ ನೀಡುವಾಗ ಮಳೆ ನೀರು ತೋಡುಗಳ ಬಗ್ಗೆ ನಿರ್ಲಕ್ಷೃ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಒಳಚರಂಡಿ ಅವ್ಯವಸ್ಥೆಯಿಂದ ಉಂಟಾದ ಕೃತಕ ನೆರೆಯಿಂದ ಸ್ಥಳೀಯರಾದ ಹೂವಯ್ಯ ಶೆಟ್ಟಿ ಎಂಬುವರ ಮನೆ ಅಂಗಳದಲ್ಲಿ ನೀರು ತುಂಬಿದೆ. ಮನೆಯವರಾದ ಬಬಿತಾ ಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡಿ, ಮನೆಗೆ ಕಲುಷಿತ ನೀರು ನುಗ್ಗಿದ್ದು, ರೋಗ ಭೀತಿ ಆವರಿಸಿದೆ. ನಪಂ ಸಿಬ್ಬಂದಿ ಸಕಾಲದಲ್ಲಿ ಆಗಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷೃದಿಂದ ಅವಾಂತರಗಳು ಸಂಭವಿಸಿದ್ದು, ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ

ಹೆದ್ದಾರಿ ನಿರ್ಮಾಣ ಸಂದರ್ಭ ಮಳೆ ನೀರು ತೋಡುಗಳ ಬಗ್ಗೆ ನಿರ್ಲಕ್ಷೃ ವಹಿಸಲಾಗಿದೆ. ಹೆದ್ದಾರಿಯ ನೀರು ಕೂಡ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ನೂತನ ಸೈಟುಗಳು ನಿರ್ಮಾಣಗೊಳ್ಳುತ್ತಿದ್ದು, ನೀರು ಹೊರಹೋಗುವ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿದೆ.- ಬಬಿತಾ ಶೆಟ್ಟಿ, ಸ್ಥಳೀಯ ನಿವಾಸಿ https://www.vijayavani.net/heavy-rain-flood-at-karwar-chendiya-village

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net