

ಮಂಗಳೂರು: ನಗರದಲ್ಲಿ ವಿಪರೀತ ಮಳೆಯಾಗುತಿದ್ದು ಸಮುದ್ರ ತೀರ, ನದಿ ತೀರದಲ್ಲಿ ವಾಸಿಸುವವರು ಹಾಗೂ ರಾಜಕಾಲುವೆಯ ಪರಿಸರದಲ್ಲಿ ವಾಸಿಸುವವರು ಬಹಳ ಎಚ್ಚರವಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ಅಮವಾಸ್ಯೆ ಕಳೆದ ತಕ್ಷಣ ಕಡಲಿನ ಅಬ್ಬರ/ ನದಿಯ ಅಬ್ಬರ ಹೆಚ್ಚಾಗುವುದು. ಕಡಲಿತ ಬರತದ ವೇಳೆಯಾಗಿರುವ ಕಾರಣ ಸಮುದ್ರದ ನೀರು ಹಿಮ್ಮುಖವಾಗಿ ಬರುವ ಕಾರಣ ರಾಜಕಾಲುವೆಗಳು ಉಕ್ಕಿ ಹರಿಯುವ ಸಾಧ್ಯತೆಗಳಿವೆ. ನದಿ ನೀರನ್ನು ಸಮುದ್ರ ಸ್ವೀಕರಿಸುತ್ತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತಿದ್ದು ಬಹಳಷ್ಟು ಕಡೆಗಳಲ್ಲಿ ನೀರು ಉಕ್ಕುವ ಸಾಧ್ಯತೆಗಳಿರುವುದರಿಂದ ನದಿ ತಡ, ಸಮುದ್ರ ತಡ ಹಾಗೂ ರಾಜಕಾಲುವೆಗಳ ಪರಿಸರದ ನಿವಾಸಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು. ಆದಷ್ಟು ಬೇಗನೆ ಅಲ್ಲಿಂದ ಸ್ಥಳಾಂತರಗೊಂಡರೂ ಉತ್ತಮ. ಹವಾಮಾನ ಇಲಾಖೆಯ ವರದಿಯೂ ಇದೇ ರೀತಿಯಾಗಿರುವ ಕಾರಣ ಜನರು ಸಾಕಷ್ಟು ಜಾಗೃತೆ ವಹಿಸಿ ಎಂದು ಸೂಚಿಸಿದೆ.