ಮೂರನೇ ದಿನವು ಮುಂದುವರೆದ ಜಿಟಿಜಟಿ ಮಳೆ

raichur
raichur
Published on

 ರಾಯಚೂರು ನಗರ ಸೇರಿ ಜಿಲ್ಲಾಧ್ಯಂತ ಮೂರನೇ ದಿನವಾಗ ಮಂಗಳವಾರ ಜಿಟಿಜಿಟಿ ಮಳೆಯಿಂದ ಜನ ಜೀವನ ಅಸ್ಥವ್ಯಸ್ತಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದಿದೆ, ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನೀರಿನಿಂದ ಆವೃತವಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ರಸ್ತೆಗಳ ಮೇಲೆ ನೀರು ನಿಂತುಕೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆಯು ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ. ಯಕ್ಲಾಸಪೂರ ಗ್ರಾಮಕ್ಕೆ ತೆರಳುವ ರಸ್ತೆಯಾಗಿದ್ದು, ಜನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ರಸ್ತೆಯು ಸಂಪೂರ್ಣ ನೀರಿನಿಂದ ತುಂಬಿಹೋಗಿದ್ದು ತಗ್ಗು ಗುಂಡಿಗಳು ಇರುವುದರಿಂದ ವಾಹನ ಸವಾರರು ತೊಂದರೆಗಿಡಾಗಿದ್ದಾರೆ. ಇದೇ ರಸ್ತೆಯಲ್ಲಿ ಕಸ ವಿಲೆವಾರಿ ಘಟಕ ಇರುವುದರಿಂದ ಕಸ ಸಾಗಾಣೆ ಮಾಡುವ ವಾಹನಗಳು ಸಹ ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ 24ಗಂಟೆಯಲ್ಲಿ ಜಿಲ್ಲಾಧ್ಯಂತ ಸರಸರಿ 5 ಮಿ.ಮೀ ಮಳೆಯಾಗಿದೆ. ಈ ಪೈಕಿ ದೇವದುರ್ಗದಲ್ಲಿ 4.6 ಮಿ.ಮೀ.,ಲಿಂಗಸುಗೂರು 4.9 ಮಿ.ಮೀ.,ಮಾನ್ವಿ 5.8 ಮಿ.ಮೀ.,ರಾಯಚೂರು 7 ಮಿ.ಮೀ.,ಸಿಂಧನೂರು 1.4 ಮಿ.ಮೀ., ಮಸ್ಕಿ 2.4 ಮಿ.ಮೀ. ಮತ್ತು ಸಿರವಾರದಲ್ಲಿ 6.6 ಮಿ.ಮೀ. ಮಳೆಯಾಗಿದೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net