

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರಿ ಮಳೆ ದೊಡ್ಡ ಅವಾಂತರ ಸೃಷ್ಟಿಸಿದ್ದು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮಧ್ಯರಾತ್ರಿ ನಂತರ ಶುರುವಾದ ವರುಣಾರ್ಭಟ ಸತತ ನಾಲ್ಕೈದು ಗಂಟೆ ಎಡೆಬಿಡದೆ ಮುಂದುವರಿಯಿತು. ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಬೆಳಗ್ಗಿನವರೆಗೆ ತೊಂದರೆ ಅನುಭವಿಸುವಂತಾಯಿತು.
ಭಾನುವಾರ ರಾತ್ರಿ ಯಾದಗಿರಿಯಲ್ಲಿ 27 ಮಿಮೀ, ಶಹಾಪುರ 14, ಸುರಪುರ 25, ಕಕ್ಕೇರಾ 13, ವಡಗೇರಾ 19, ಹುಣಸಗಿ ವಲಯದಲ್ಲಿ 18 ಮಿಮೀ ಮಳೆಯಾಗಿದೆ. ಶಹಾಪುರ ತಾಲೂಕಿನ ಬಬಲಾದ ಗ್ರಾಮದ ಡಾ.ಅಂಬೇಡ್ಕರ್ ಬಡಾವಣೆಯಲ್ಲಿ ಮಳೆ ನೀರಿನಿಂದ ಮನೆಗಳು ಜಲಾವೃತಗೊಂಡಿದ್ದು, ಆಹಾರಧಾನ್ಯಗಳು ನೀರು ಪಾಲಾಗಿವೆ. ಕೆಲ ಮನೆಗಳಲ್ಲಿ ವಿದ್ಯುತ್ ಯಂತ್ರದಿಂದ ನೀರನ್ನು ಖಾಲಿ ಮಾಡಲಾಗಿದ್ದು, ರಸ್ತೆಗಳಲ್ಲಿ ಚರಂಡಿ ನೀರು ಹರಿದು ದುರ್ವಾಸನೆ ಬೀರುತ್ತಿದೆ.
ಮಳೆರಾಯನ ರುದ್ರನರ್ತನಕ್ಕೆ ಯಾದಗಿರಿ ರೈಲ್ವೆ ಮೇಲ್ಸೇತುವೆ ಎಡಭಾಗ ಸಂಪೂರ್ಣ ಕುಸಿದಿದ್ದು, ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ವಿಜಯಪುರ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗಿರುವ ಈ ಸೇತುವೆ ರಸ್ತೆ ಅವೈಜ್ಞಾನಿಕವಾಗಿ ನಿಮರ್ಿಸಲಾಗಿದೆ. ರಸ್ತೆ ಮಧ್ಯೆ ತೆಗ್ಗು ಬಿದ್ದಿದ್ದು, ಮಳೆಯಿಂದಾಗಿ ಅಲ್ಲಲ್ಲಿ ಬಿರುಕು ಸಹ ಬಿಟ್ಟಿದೆ. ಡಾಂಬಾರ್ ಕಿತ್ತು ಹೋಗಿದೆ.
ರಾತ್ರಿ ವೇಳೆ ರಸ್ತೆ ಕುಸಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಚಾಮಾ ಲೇಔಟ್ನಲ್ಲಿ ಆಳೆತ್ತರ ನೀರು ನಿಂತಿದ್ದು, ಇಡೀ ಪ್ರದೇಶ ಕೆರೆಯಾಗಿ ಮಾರ್ಪಟ್ಟಿದೆ. ಲುಂಬಿನ ವನದ ಕೆರೆ ಸಂಪೂರ್ಣ ಭತರ್ಿಯಾಗಿದೆ. ಕೆಲವೆಡೆ ವಿದ್ಯುತ್ ತಂತಿ ತುಂಡಾಗಿದ್ದರಿಂದ ಜನತೆ ಆತಂಕದಲ್ಲೇ ದಿನದೂಡುವಂತ ಸ್ಥಿತಿ ನಿಮರ್ಾಣವಾಗಿದೆ.
ಕಳೆದ ವರ್ಷ ಇಷ್ಟಿರಲಿಲ್ಲ ಮಳೆ: 2019ರ ಜೂನ್ ಮೊದಲ ವಾರದಿಂದ ಕೊನೇ ವಾರದವರಗೆ ಜಿಲ್ಲೆಯಲ್ಲಿ 88 ಮಿಮೀ ಮಳೆಯಾಗಿದ್ದು, ಶೇ.22 ಕೊರತೆ ಎದುರಾಗಿತ್ತು. 2018ರ ಜೂನ್ ತಿಂಗಳಲ್ಲೂ 111 ಮಿಮೀ ಮಳೆ ಪೈಕಿ 108 ಮಿಮೀ ಮಳೆಯಾಗಿತ್ತು.