

ಮಂಗಳೂರು: ಜಿಲ್ಲೆಯಾದ್ಯಂತ ಮತ್ತೆ ಮಳೆರಾಯ ಆರ್ಭಟಿಸಿದ್ದು ನಗರದಲ್ಲಿ ಶನಿವಾರ ತಡರಾತ್ರಿ ಕೃತಕನೆರೆ ಕಾಡಿದೆ.
ನಗರದ ಪಂಪ್ವೆಲ್ ಜಂಕ್ಷನ್, ಕುದ್ರೋಳಿ, ಅಳಕೆ, ಕೊಟ್ಟಾರ ಚೌಕಿ ಪ್ರದೇಶಗಳಲ್ಲಿ ದಿಢೀರ್ ಸುರಿದ ಭಾರಿ ಮಳೆಯಿಂದಾಗಿ ಮನೆ,ಅಂಗಡಿಗಳಿಗೆ ನೀರು ನುಗ್ಗಿದೆ.
ಅಳಕೆ ಗುಜರಾತಿಶಾಲೆ ಬಳಿಯೂ ಭಾರಿಪ್ರಮಾಣದಲ್ಲಿನೀರು ತುಂಬಿಕೊಂಡಿತ್ತು. ಪುಣ್ಯವಷಾತ್ ರಾತ್ರಿಯೇ ಮಳೆ ಕಡಿಮೆಯಾದ ಕಾರಣ ನೀರಿನ ಮಟ್ಟ ತಗ್ಗಿದೆ.