

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ಮೇಳದ 3ನೇ ದಿನವೂ ಭರಪೂರ ಮಳೆಯ ಸಿಂಚನವಾಯಿತು. ಸೋಮವಾರ ಕೃಷಿ ಕಾರ್ಯಗಳಿಗೆ ಬಿಡುವು ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು. ಸಂಜೆ 4 ಗಂಟೆ ಸುಮಾರಿಗೆ ಮಳೆಯ ಆಗಮನವಾಯಿತು. ಕೃಷಿ ಕೆಲಸಗಳಿಗೆ ಅಗತ್ಯ ಸಲಕರಣೆ, ಬಿತ್ತನೆ ಬೀಜ ಖರೀದಿಸಲು ಮುಗಿಬಿದ್ದಿದ್ದ ಜನರು ಮಳೆಯಿಂದ ಚೆಲ್ಲಾಪಿಲ್ಲಿಯಾಗಿ ಓಡಿದರು.
ಮಳೆಯಿಂದ ರಕ್ಷಣೆ ಪಡೆಯಲು ಮಳಿಗೆಗಳಿಗೆ ನುಗ್ಗಿದರು. ಹೆಚ್ಚಿನ ಜನರು ಮುಖ್ಯ ವೇದಿಕೆಯ ಟೆಂಟ್‌ನಲ್ಲಿ ಆಶ್ರಯ ಪಡೆದರು. ಇದರಿಂದಾಗಿ ರೈತರಿಂದ ರೈತರಿಗಾಗಿ ನಡೆಯುತ್ತಿದ್ದ ಸಂವಾದ ಕಾರ್ಯಕ್ರಮ ಜನರಿಂದ ಭರ್ತಿಯಾಗಿತ್ತು. ಮಳೆಯಿಂದ ರಕ್ಷಣೆ ಪಡೆಯಲು ಅಲ್ಲೇ ಖರೀದಿಸಿದ್ದ ಪ್ಲಾಸ್ಟಿಕ್ ಬುಟ್ಟಿ, ತಾಡಪತ್ರಿಗಳ ಮೊರೆ ಹೋದರು.