ಕಸ ಎಲ್ಲೆಂದರಲ್ಲಿ ಬಿಸಾಡುವವರಿಗೆ ಭಾರಿ ದಂಡ : ಬೂಡಿಯಾರ್ ರಾಧಾಕೃಷ್ಣ ರೈ ಸಲಹೆ

New Project (11)
Published on

ಪುತ್ತೂರು ಗ್ರಾಮಾಂತರ: ಸ್ವಚ್ಛತೆಯ ವಿಚಾರದಲ್ಲಿ ಪರ್ಯಾಯ ವ್ಯವಸ್ಥೆ ಕಂಡು ಹಿಡಿಯದಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲೆಂದರೆಲ್ಲಿ ಕಸ ತಂದು ಹಾಕುವವರನ್ನು ಹಿಡಿದು 10 ಸಾವಿರ ರೂ. ತನಕ ದಂಡ ವಿಧಿಸುವ ಜತೆಗೆ ಅವರ ಹೆಸರನ್ನು ಬಹಿರಂಗಗೊಳಿಸಬೇಕು. ಹೀಗೆ ಮಾಡಿದರೆ ಮಾತ್ರ ಒಂದಷ್ಟು ಜಾಗೃತಿ ಮೂಡಲು ಸಾಧ್ಯ ಎಂದು ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ ಅಭಿಪ್ರಾಯಪಟ್ಟರು.

ಆರ್ಯಾಪು ಗ್ರಾಪಂ ವ್ಯಾಪ್ತಿಯ ಬೂಡಿಯಾರ್‌ನ ತಮ್ಮ ನಿವಾಸದಲ್ಲಿ ಆರ್ಯಾಪು ಗ್ರಾಪಂನ ಸ್ವಚ್ಛತಾ ಸೇನಾನಿಗಳನ್ನು ಗೌರವಿಸಿ ಮಾತನಾಡಿದರು.

ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಎಚ್, ಆರ್ಯಾಪು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ನಾಗೇಶ್ ಎಂ. ಮಾತನಾಡಿದರು.

ಆರ್ಯಾಪು ಗ್ರಾಪಂನ ಸ್ವಚ್ಛತಾ ಸೇನಾನಿಗಳಾದ ಪುಷ್ಪಲತಾ ಸಂಪ್ಯ, ಉಷಾ ಸಂಪ್ಯ, ಪರಮೇಶ್ವರ ಕುಂಜೂರುಪಂಜ ಅವರನ್ನು ಬೂಡಿಯಾರ್ ರಾಧಾಕೃಷ್ಣ ರೈ ನಗದು ಪುರಸ್ಕಾರ ನೀಡಿ ಗೌರವಿಸಿದರು.

ಗ್ರಾಪಂ ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ಬಳಕ್ಕ, ಬಿಜೆಪಿ ಕುರಿಯ ಬೂತ್ ಸಮಿತಿ ಅಧ್ಯಕ್ಷ ಗಣೇಶ್ ರೈ ಬೂಡಿಯಾರ್, ಆನಂದ ರೈ ಡಿಂಬ್ರಿ, ರಾಮಯ್ಯ ಗೌಡ ಗಡಾಜೆ, ವಸಂತ ಗೌಡ, ಗಣೇಶ್ ಗೌಡ, ನಾರಾಯಣ, ಸುಧಾಮಣಿ ಜಿ.ರೈ ಬೂಡಿಯಾರ್, ಜಯಲಕ್ಷ್ಮೀ, ತಿಲಕ್ ರೈ ಕುತ್ಯಾಡಿ, ಅಶ್ವಿತ್, ರಾಧಾಕೃಷ್ಣ ಮುಂಡೂರು ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಸ್ವಚ್ಛತಾ ಸೇನಾನಿಗಳನ್ನು ಮನೆಯಲ್ಲಿ ಸನ್ಮಾನಿಸುವುದು ವಿಶೇಷ ಕಾರ್ಯ. ಪ್ರತಿಯೊಬ್ಬರೂ ಸ್ವಚ್ಛತಾ ಸೇನಾನಿಗಳನ್ನು ಗೌರವದಿಂದ ಕಾಣುವ ವಾತಾವರಣ ನಿರ್ಮಾಣವಾಗಬೇಕು. ನವೀನ್‌ಕುಮಾರ್ ಭಂಡಾರಿ, ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net