

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ಮೇಳದ 3ನೇ ದಿನವಾದ ಸೋಮವಾರ ಜನಜಾತ್ರೆ ಸೇರಿತ್ತು. ಸೋಮವಾರ ಕೃಷಿ ಚಟುವಟಿಕೆಗಳಿಗೆ ಬಿಡುವು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.
ಕೃಷಿ ವಿಶ್ವವಿದ್ಯಾಲಯದ ಅಂಕಿ- ಅಂಶದ ಪ್ರಕಾರ 3ನೇ ದಿನ ಸುಮಾರು 6.45 ಲಕ್ಷ ರೈತ ಬಾಂಧವರು, ವಿಸ್ತರಣಾ ಕಾರ್ಯಕರ್ತರು ಹಾಗೂ ಇಲಾಖೆಯ ಅಽಕಾರಿಗಳು ಪಾಲ್ಗೊಂಡಿದ್ದರು. ಕೃಷಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ, ಯಂತ್ರೋಪಕರಣ, ಪ್ಲಾಸ್ಟಿಕ್ ಸಾಮಗ್ರಿಗಳ ಮಳಿಗೆಗಳಲ್ಲಿ ಜನಜಾತ್ರೆ ಕಂಡುಬAತು.
ವಿಚಾರಗೋಷ್ಠಿ: ಮುಖ್ಯ ವೇದಿಕೆಯಲ್ಲಿ ಕೃಷಿ ವಿವಿ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ವಿದ್ಯಾಽಕಾರಿ ಡಾ. ಉಷಾ ಮಳಗಿ ಅವರು ಪರಿಕರಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ವೃದ್ಧಿಸಲು ದ್ವಿತೀಯ ಕೃಷಿ' ಕುರಿತು ವಿಷಯ ಮಂಡಿಸಿದರು.ನAತರ ಸಂಪನ್ಮೂಲ ವ್ಯಕ್ತಿ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ವಿಸ್ತರಣಾ ನಿರ್ದೇಶಕ ಡಾ. ಬಿ. ಎಂ. ಚಿತ್ತಾಪುರ ಅವರುಬರ ನಿರ್ವಹಣೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳು' ಕುರಿತು ಮಾಹಿತಿ ನೀಡಿದರು.
ನಂತರ ಕೃಷಿ ವಿಶ್ವವಿದ್ಯಾಲಯದ, ವಿವಿಧ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರಿಗೆ ರಂಗೋಲಿ, ಸಿರಿಧಾನ್ಯ ಆಧಾರಿತ ಖಾದ್ಯ ತಯಾರಿಕೆ, ಕಸೂತಿ ಮತ್ತು ಮಕ್ಕಳಿಗೆ ವಿವಿಧ ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
567.30 ಕ್ವಿಂಟಲ್ ಬಿತ್ತನೆ ಬೀಜ ಮಾರಾಟ
ಕೃಷಿ ಮೇಳದ ಪ್ರಮುಖ ಆಕರ್ಷಣೆ ಪ್ರಮಾಣೀಕೃತ ಬಿತ್ತನೆ ಬೀಜ ಮಾರಾಟ. ವಿಶ್ವವಿದ್ಯಾಲಯದ ಬೀಜ ಘಟಕದಿಂದ ರೈತರು ಸುಮಾರು 567.30 ಕ್ವಿಂಟಲ್ ಹಿಂಗಾರು ಬಿತ್ತನೆಗೆ ಅಗತ್ಯ ಬೀಜಗಳನ್ನು ಖರೀದಿಸಿದರು.