ಗಾಳಿ, ಮಳೆಗೆ ಅಪಾರ ಬೆಳೆ ಹಾನಿ

20arsph1ep,,,
ಗಾಳಿ, ಮಳೆ ರಭಸಕ್ಕೆ ಅರಸೀಕೆರೆ ತಾಲೂಕಿನ ಕಾಟೀಕೆರೆ ಗ್ರಾಮದ ಕೃಷಿಕ ಭೈರೇಶ್ ಅವರ ಬಾಳೆ ತೋಟ, ತೆಂಗಿನ ಮರಗಳು ಧರೆಗುರುಳಿರುವುದು.
Published on

ಅರಸೀಕೆರೆ: ನಗರ ಸೇರಿದಂತೆ ತಾಲೂಕಿನ ಕಸಬಾ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಹಲವೆಡೆ ಗಾಳಿ, ಮಳೆಗೆ ಅಪಾರ ಹಾನಿಯಾಗಿದೆ.

ಕಾಟೀಕೆರೆ ಗ್ರಾಮದ ಭೈರೇಶ್ ಅವರ ಬಾಳೆ ತೋಟ ಸಂಪೂರ್ಣ ನೆಲ ಕಚ್ಚಿದ್ದರೆ, ತೆಂಗಿನ ಮರಗಳು ಧರೆಗುರುಳಿವೆ. ಕಲ್ಲನಾಯ್ಕನಹಳ್ಳಿ, ಸಂಕೋಡನಹಳ್ಳಿ, ಜಾಜೂರು, ನಾಗತಿಹಳ್ಳಿ ಒಳಗೊಂಡಂತೆ ಕೆಲವೆಡೆ ಗಾಳಿಯ ರಭಸಕ್ಕೆ ಹತ್ತಾರು ತೆಂಗಿನ ಮರಗಳು ಬುಡ ಸಹಿತ ಬಿದ್ದಿವೆ. ನಗರದ ಹಲವು ಬಡಾವಣೆಗಳಲ್ಲಿ ಚರಂಡಿಗಳು ಉಕ್ಕಿ ಹರಿದ ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದವು.

ಗುರುಭವನ, ಬಸವರಾಜೇಂದ್ರ ಶಾಲಾ ಆವರಣದಲ್ಲಿ ನೀರು ಸಂಗ್ರಹವಾಗಿತ್ತು. ಹಾಸನ ರಸ್ತೆ, ಸರಸ್ವತಿಪುರಂ ಬಡಾವಣೆ ನಿವಾಸಿಗಳು ಪರದಾಡಿದರು. ಗಾಳಿ, ಮಳೆ ರಭಸಕ್ಕೆ ಹಾನಿಯಾಗಿರುವ ಬೆಳೆಗಳಿಗೆ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ರೈತಸಂಘದ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net