ಬಿಸಿಯೂಟದ ಕೊಠಡಿ ಬಾಗಿಲು ಮುರಿದು ಕಳ್ಳತನ

Crime Logo
Published on

ಹಾವೇರಿ: ಮಕ್ಕಳಿಗೆ ಬಿಸಿಯೂಟ ಮಾಡುವ ಕೊಠಡಿಯ ಬಾಗಿಲು ಮುರಿದ ಕಳ್ಳರು ಅಕ್ಕಿ, ಬೇಳೆ ಸೇರಿ ಇತರ ಅಡುಗೆ ಸಾಮಗ್ರಿಗಳನ್ನು ದೋಚಿದ ಘಟನೆ ನಗರದ ಮುನ್ಸಿಪಲ್​ ಪ್ರೌಢಶಾಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಶಾಲೆಯ ಬಿಸಿಯೂಟದ ಕೊಠಡಿಯ ಬೀಗ ಮುರಿದು ಒಳಗೆ ನುಗ್ಗಿದ ಖದೀಮರು 50 ಕೆ.ಜಿ. ತೂಕದ 20 ಅಕ್ಕಿ ಚೀಲ, 6 ತೊಗರಿ ಬೇಳೆ ಚೀಲ, 1 ಗೋಧಿ ಚೀಲ ಹಾಗೂ ಗ್ಯಾಸ್​ ಸಿಲಿಂಡರ್​ ಸೇರಿ 93 ಲಕ್ಷ ರೂ. ಮೌಲ್ಯದ ಅಡುಗೆ ಸಾಮಗ್ರಿಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net