ಮನಸೂರೆಗೊಂಡ ಸಂಗೀತ ಸುಧೆ

MUSIC
ನರಗುಂದ ಪಟ್ಟಣದ ದಂಡಾಪೂರ 2ನೇ ಗಲ್ಲಿಯಲ್ಲಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಗಣೇಶೋತ್ಸವ ನಿಮಿತ್ತ ರಾಷ್ಟ್ರ ಪ್ರಶಸ್ತಿ ವಿಜೇತ ಪಂ. ಚಂದ್ರಕಾಂತ ಇನಾಮದಾರ ಅವರಿಂದ ಶಾಸ್ತ್ರೀಯ ಸಂಗೀತ ಜರುಗಿತು.
Published on

ನರಗುಂದ: ಪಟ್ಟಣದ ದಂಡಾಪೂರ 2ನೇ ಗಲ್ಲಿಯಲ್ಲಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ 119ನೇ ಗಣೇಶೋತ್ಸವ ನಿಮಿತ್ತ ರಾಷ್ಟ್ರ ಪ್ರಶಸ್ತಿ ವಿಜೇತ ಪಂ. ಚಂದ್ರಕಾಂತ ಇನಾಮದಾರ ಅವರಿಂದ ಶಾಸ್ತ್ರೀಯ ಸಂಗೀತ ಏರ್ಪಡಿಸಲಾಗಿತ್ತು.

ಧಿಮಕಿಟ್ ಧಿಮಕಿಟ್ ಬಾಜೆ ಮೃದಂಗ ಗಣೇಶ ಸ್ತುತಿ ಗೀತೆಗಾಯನದೊಂದಿಗೆ ದರ್ಬಾರ ಗಾಯನ ಆರಂಭಗೊಳಿಸಲಾಯಿತು. ದರ್ಬಾರ ಕಾನಡಾ ರಾಗದಲ್ಲಿ ಜಾನಕಿ ರಾಮಖ್ಯಾಲ್ ಗಾಯನ ಪ್ರಸ್ತುತಪಡಿಸಲಾಯಿತು. ನಂತರ ದಾನ ಸಾಹಿತ್ಯ, ಅಭಂಗ ಗೀತೆ, ಭಜನ ಗೀತೆ ಕಾಲಜ್ಞಾನಪದ್ಯ ಹೀಗೆ ವಿವಿಧ ಗೀತೆ ಪ್ರಕಾರಗಳನ್ನು ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಹಾಡಿದ ಚಂದ್ರಕಾಂತ ಇನಾಮದಾರ ಪ್ರೇಕ್ಷಕರಿಗೆ ರಂಜನೆ ನೀಡಿದರು.

ಹಾರ್ಮೋನಿಯಂ ಪಂ. ಶ್ರೀನಿವಾಸ ಇನಾಮದಾರ, ತಬಲಾ ಸಾಥ್ ಚೇತನಕುಮಾರ ಇನಾಮದಾರ ಹಾಗೂ ಚಿದಂಬರ ಪುರೋಹಿತ್ ಸಂಗೀತಕ್ಕೆ ಸಾಥ್ ನೀಡಿ ಕಾರ್ಯಮಕ್ಕೆ ಮರುಗು ನೀಡಿದರು. ನಾಗೇಶ ಜೋಶಿ, ಪ್ರಶಾಂತ ಜೋಶಿ, ಗುರುನಾಥ ಸಬನಿಸ್, ಶ್ರೀಪಾದ ಕುರುಗೋವಿನಕೊಪ್ಪ. ಶೇಷಣ್ಣ ದುಶಿ, ಅಕ್ಷಯ ಜೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net