ಹೃದಯ ಮೇಲೆ ಒತ್ತಡ ಸಲ್ಲ

29 DEVDURGA 02
ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಹೃದಯ ದಿನಾಚರಣೆ ನಿಮಿತ್ತ ಟಿಎಚ್‌ಒ ಡಾ.ಬನದೇಶ್ವರ ಮಕ್ಕಳ ಜತೆ ಸೈಕ್ಲಿಂಗ್ ಮಾಡಿದರು. ಮುಖ್ಯ ವೈದ್ಯಾಧಿಕಾರಿ ಶಿವಾನಂದ, ವೈದ್ಯರಾದ ಗಂಗಾಧರ, ಪ್ರವೀಣ್‌ಕುಮಾರ, ಆಡಳಿತಾಧಿಕಾರಿ ರಾಜು, ಎನ್‌ಡಿಸಿ ವಿಶ್ವನಾಥ, ಪ್ರಭುರಾಜ, ಭೀಮರೆಡ್ಡಿಗೌಡ, ನಾಗರಾಜ ಗಣೇಕಲ್, ಅರುಣಾ, ಸಂತೋಷ, ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ ಇತರರಿದ್ದರು.
Published on

ದೇವದುರ್ಗ: ನನಗಾಗಿ ನೂರು ಹೆಜ್ಜೆ ನಡೆ ನಿನಗಾಗಿ ಮಿಡಿಯುತ್ತೇನೆ ಎನ್ನುವುದು ಹೃದಯದ ಮಾತು. ಪ್ರತಿಯೊಬ್ಬರೂ ಹೃದಯವನ್ನು ಪರಿಶುದ್ಧವಾಗಿ ಇರಿಸಿಕೊಂಡರೆ ರೋಗಗಳಿಂದ ದೂರವಿರಬಹುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಹೃದಯ ರೋಗ ದಿನಾಚರಣೆಯಲ್ಲಿ ಭಾನುವಾರ ಮಾತನಾಡಿದರು.

ಹೃದಯ ಮೇಲೆ ಒತ್ತಡವಾದರೆ ಅಧಿಕ ರಕ್ತದೊತ್ತಡ, ಪಾರ್ಶವಾಯು, ಉಸಿರಾಟದ ತೊಂದರೆ, ಹೃದಯ ಸಂಬಂಧಿತ ಹಾಗೂ ನರರೋಗ ಸಂಬಂಧಿತ ಅಲರ್ಜಿ, ಮಲಬದ್ಧತೆ, ಚಟುವಟಿಕೆ ಇಲ್ಲದ ಜೀವನದಂತೆ ನಾನಾ ರೋಗಗಳು ಬರುವ ಸಾಧ್ಯತೆಯಿದೆ.


ಹೃದಯ ಸಂಬಂಧಿತ ರೋಗ ದೂರಮಾಡಲು ತಂಬಾಕು, ಗುಟ್ಕಾ, ಮದ್ಯಪಾನ ತ್ಯಜಿಸಬೇಕು. ನಿತ್ಯ ವ್ಯಾಯಾಮ ರೂಢಿಸಿಕೊಳ್ಳಬೇಕು. ಜಡ್ಡು ಗಟ್ಟಿದ ಆಹಾರ ಬಿಟ್ಟು, ಮಿತ ಆಹಾರ ಸೇವನೆ, ತರಕಾರಿ, ಸೊಪ್ಪು, ಪಲ್ಯೆ ಸೇವನೆ, ದೇಹದ ತೂಕು ಕಡಿಮೆ ಮಾಡುವುದು, ಯೋಗ, ಧ್ಯಾನ, ಸೈಕ್ಲಿಂಗ್ ಸೇರಿ ಇತರೆ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹೃದಯ ಆರೋಗ್ಯ ಜಾಗೃತಿಗಾಗಿ ಆಸ್ಪತ್ರೆಯಿಂದ ಕೋರ್ಟ್ ಆವರಣದವರೆಗೆ ಸೈಕಲ್ ಜಾಥಾ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net