ಹೃದಯದ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲ

20-DVD-5
ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಹೃದಯರೋಗ ತಪಾಸಣೆ ಶಿಬಿರದಲ್ಲಿ ಡಾ.ಮುರಳಿರಾವ್, ರೋಗಿಗಳ ಆರೋಗ್ಯ ತಪಾಸಣೆ ಮಾಡಿದರು. ಟಿಎಚ್‌ಒ ಬನದೇಶ್ವರ ಗಬ್ಬೂರು, ಡಾ.ಗಂಗಾಧರ್, ಮಕ್ಕಳ ತಜ್ಞ ಡಾ.ಶಿವಕುಮಾರ್ ದೇಸಾಯಿ, ರಾಜು ಅಬೆಲ್, ತಿಮ್ಮಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಕ್ಷಯರೋಗ ಮೇಲ್ವಿಚಾರಕ ರವಿಶಂಕರ ಶುಕ್ಲಾ ಇದ್ದರು.
Published on

ದೇವದುರ್ಗ: ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಕಾಲಕಾಲಕ್ಕೆ ತಪಾಸಣೆ ಮಾಡಿಸಬೇಕು ಎಂದು ಒಪೆಕ್ ಆಸ್ಪತ್ರೆ ಹೃದಯರೋಗ ತಜ್ಞ ಡಾ.ಮುರಳಿರಾವ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಆಯೋಜಿಸಿದ್ದ ಹೃದಯರೋಗ ತಪಾಸಣೆ ಶಿಬಿರದಲ್ಲಿ ಶನಿವಾರ ಮಾತನಾಡಿದರು. ಆಧುನಿಕ ಜೀವನ ಶೈಲಿ, ರಾಸಾಯನಿಕಯುಕ್ತ ಆಹಾರ, ಅಶುದ್ಧ ನೀರು, ಆರೋಗ್ಯ ಕಾಪಾಡುವಲ್ಲಿ ಉದಾಸೀನತೆ ಸೇರಿ ನಾನಾ ಕಾರಣದಿಂದ ಹೃದಯಾಘಾತದಂಥ ಸಮಸ್ಯೆಗಳು ಕಂಡುಬರುತ್ತಿವೆ.

ಹೃದಯ ಸಂಬಂಧಿತ ಕಾಯಿಲೆಗಳ ಬಗ್ಗೆ ಜನರು ಆತಂಕಕ್ಕೆ ಒಳಗಾಗದೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಅಗತ್ಯದಷ್ಟು ಆಹಾರ ಸೇವನೆ, ವ್ಯಾಯಾಮ, ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡುವ ಜತೆಗೆ ವೈದ್ಯರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು.

ಇತ್ತೀಚಿನ ದಿನಗಳಲ್ಲಿ ಯುವಜನರು, ಮಕ್ಕಳಲ್ಲೂ ಹೃದಯ ಸಂಬಂಧಿತ ಕಾಯಿಲೆಗಳು ಕಂಡುಬರುತ್ತಿವೆ. ಯುವಕರು ಆರೋಗ್ಯದ ಕಡೆ ಕಾಳಜಿವಹಿಸಬೇಕು ಎಂದರು.

ಟಿಎಚ್‌ಒ ಬನದೇಶ್ವರ ಗಬ್ಬೂರು, ಡಾ.ಗಂಗಾಧರ್, ಮಕ್ಕಳ ತಜ್ಞ ಡಾ.ಶಿವಕುಮಾರ್ ದೇಸಾಯಿ, ರಾಜು ಅಬೆಲ್, ತಿಮ್ಮಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಕ್ಷಯರೋಗ ಮೇಲ್ವಿಚಾರಕ ರವಿಶಂಕರ ಶುಕ್ಲಾ, ಪ್ರಮುಖರಾದ ಸೋಮಪ್ಪ, ಮುತ್ತಣ್ಣ, ಚಂದ್ರಾಮಪ್ಪ, ಶಾಂತಮ್ಮ ರಾಮನಗೌಡ, ಸಂತೋಷ್, ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net