ಹೃದಯ ಆರೋಗ್ಯ ತಪಾಸಣೆ

New Bhavasar new
Published on

ಹುಬ್ಬಳ್ಳಿ : ವಿದ್ಯಾನಗರದ ತಿಮ್ಮಸಾಗರ ಗುಡಿಯ ಹಿಂಭಾಗದಲ್ಲಿರುವ ಭಾವಸಾರ ಭವನದಲ್ಲಿ ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ವತಿಯಿಂದ ಹುಬ್ಬಳ್ಳಿಯ ವಿಹಾನ್ ಹಾರ್ಟ್​ಕೇರ್ ಸೆಂಟರ್ ಸಹಯೋಗದೊಂದಿಗೆ ಹೃದಯಕ್ಕೆ ಸಂಬಂಧಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ ಆಯೋಜಿಸಲಾಗಿತ್ತು.

ಇಕೋ, ಇಸಿಜಿ, ರಕ್ತದ ಒತ್ತಡ ಹಾಗು ಮಧುಮೇಹ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು. ಸುಮಾರು 100 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಅಧ್ಯಕ್ಷೆ ಲೀಲಾ ಸುತ್ರಾವೆ, ಡಾ. ಬಿ.ಐ. ಮೀರಜಕರ್, ಜಯಶ್ರೀತಾಯಿ ತಾತುಸ್ಕರ, ಕೆ.ಜಿ. ಟಿಕಾರೆ, ಪ್ರಕಾಶ ತಿರುಮಲ್ಲೆ, ಕುಶಾಲ ಬೇದ್ರೆ, ಡಾ. ಎಸ್.ಎಲ್. ಕರಣೆೆ, ವಿಜಯಕುಮಾರ ಲಾಂಡೆ, ದೀಪಕ ಮಾತಾಡೆ, ಜಗದೀಶ ಹಂಚಾಟೆ, ಪ್ರಕಾಶ ಬೆಳಂಕರ, ಎಂ.ಕೆ. ರಾಶಿನಕರ, ಅಶೋಕ ಮಹೀಂದ್ರಕರ, ರುಷಾಲಿ ಹಂಚಾಟೆ, ರಾಮಚಂದ್ರ ಬೇಂದ್ರೆ, ಸ್ನೇಹಾ ಬೇದರೆ, ಹೇಮಾ ಸರ್ವದೆ, ಅನಂತ ಸರ್ವದೆ ಹಾಗೂ ಇತರರು ಉಪಸ್ಥಿತರಿದ್ದರು.

ವಿಹಾನ್ ಆಸ್ಪತ್ರೆಯ ಡಾ. ಸ್ಮಿತಾ, ಡಾ. ರಶ್ಮಿ ಸುತ್ರಾವೆ, ಶ್ರುತಿ, ಹನುಮಂತಗೌಡ ಆರೋಗ್ಯ ತಪಾಸಣೆ ನಡೆಸಿದರು. ಸಂಸ್ಥೆಯ ಕಾರ್ಯದರ್ಶಿ ಮನೋಜ ಜಾಧವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net