

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳಾ ದಿನಾಚರಣೆ ನಿಮಿತ್ತ ನಗರದ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ ಮಾ. 12ರಂದು ಸಾರ್ವಜನಿಕರಿಗೆ ಉಚಿತ ಹೃದಯ ರೋಗ ತಪಾಸಣೆ ಉಚಿತ ಶಿಬಿರ ಮತ್ತು ವೆರಿಕೋಸ್ ವೇನ್ಸಗೆ ಸಂಬಂಧಿಸಿದಂತೆ ಆರೋಗ್ಯ ಉಪನ್ಯಾಸವನ್ನು ಹಳಿಯಾಳ ರಸ್ತೆಯಲ್ಲಿನ ಪರಿಸರ ಭವನದಲ್ಲಿ ಏರ್ಪಡಿಸಲಾಗಿದೆ.
ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ಹು-ಧಾ ನಾಗರಿಕ ಪರಿಸರ ಸಮಿತಿ ಆಶ್ರಯದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಬಿಪಿ, ಶುಗರ್, ಇಸಿಜಿ, ಇಕೋ ತಪಾಸಣೆ ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಗುವುದು. ವೆರಿಕೋಸ್ ವೇನ್ಸಗೆ ಸಂಬಂಧಿಸಿ ಡಾ. ಬಸವರಾಜೇಂದ್ರ ಅನುರಶೆಟ್ರು ಉಪನ್ಯಾಸ ನೀಡುವರು. ಜನರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.