

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಕೈಗೊಂಡಿದ್ದ ಉಚಿತ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯ 5 ಶಿಬಿರದಲ್ಲಿ ಉಚಿತ ಆರೋಗ್ಯ ಸೇವೆಯ ಮೂಲಕ ಗಂಭೀರ ಸಮಸ್ಯೆಯ (ಹುಟ್ಟಿನಿಂದಲೇ ಕಾಡುವ ಹೃದ್ರೋಗ) ಸ್ಥಿತಿಯಲ್ಲಿದ್ದ 130 ಮಕ್ಕಳ ಜೀವಗಳನ್ನು ಕಾಪಾಡಲಾಗಿದೆ.
ಯುನೈಟೆಡ್ ಕಿಂಗ್ಡಮ್ ನ ಹೀಲಿಂಗ್ ಲಿಟಲ್ ಹಾರ್ಟ್ಸ್ ಸಹಯೋಗದೊಂದಿಗೆ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯಗೆ ಸಂಬ0ಧಿಸಿದ0ತೆ 5 ಶಿಬಿರಗಳನ್ನು ಕೈಗೊಳ್ಳಲಾಗಿದೆ. ಜ.27 ರಿಂದ ಜ.31 ರವರೆಗೆ 5 ನೇ ಹಂತದ ಶಿಬಿರದಲ್ಲಿ 38 ಕ್ಕೂ ಹೆಚ್ಚು ಪುಟಾಣಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಈ ಶಿಬಿರಗಳಲ್ಲಿ 130 ಕ್ಕೂ ಹೆಚ್ಚು ಮಕ್ಕಳ ಜೀವವನ್ನು ಉಳಿಸಲಾಗಿದೆ.
*ನಿರೀಕ್ಷೆ ಹೆಚ್ಚಿಸಿದ ಪವಾಡ
ದುಬಾರಿ ಶಸ್ತ್ರಚಿಕಿತ್ಸೆಯ ಆರೋಗ್ಯ ಸೇವೆಯನ್ನು ಸದ್ಗುರುಗಳ ಬೆಂಬಲದಲ್ಲಿ ಅನೇಕರಿಗೆ ಉಚಿತವಾಗಿ ಒದಗಿಸಲಾಗಿದೆ. ಶಿಕ್ಷಣ, ಆರೋಗ್ಯ, ಆಹಾರವು ಜನರ ಮೂಲಭೂತ ಹಕ್ಕು. ಇದು ಎಲ್ಲ ಜನರಿಗೂ ಯಾವುದೇ ಶುಲ್ಕವಿಲ್ಲದೇ ಸಿಗಬೇಕೆಂಬ ಸಂದೇಶವನ್ನು ಸತ್ಯಸಾಯಿ ಬಾಬಾ ಸಾರಿದ್ದು ಇದು ಮುದ್ದೇನಹಳ್ಳಿಯಲ್ಲಿ ನಿರೀಕ್ಷೆ ಮೀರಿ ನಡೆಯುತ್ತಿದ್ದು ಇದು ಒಂದು ದೊಡ್ಡ ಪವಾಡವಾಗಿದೆ ಎಂದು ಇಲ್ಲಿನ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿನ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ರಘುಪತಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಗುಣಮಟ್ಟ ಮತ್ತು ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ ಸತೀಶ್ ಬಾಬು, ಸಾರ್ವಜನಿಕ ಸಂಪರ್ಕಾಧಿಕಾರಿ ಗೋವಿಂದರೆಡ್ಡಿ,ಯುನೈಟೆಡ್ ಕಿಂಗ್ಡಮ್ ಹೀಲಿಂಗ್ ಲಿಟಲ್ ಹಾರ್ಟ್ಸ್ ಫೌಂಡೇಶನ್ ಟ್ರಸ್ಟಿ ಲೆಸ್ಲಿ ಮತ್ತಿತರರು ಇದ್ದರು.
*ಖ್ಯಾತ ವೈದ್ಯರ ತಂಡ
ಚಿಕಿತ್ಸಾ ಶಿಬಿರದಲ್ಲಿ ಮಟ್ಟದ ಖ್ಯಾತ ವೈದ್ಯರ ತಂಡವು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ, ಹಲವರ ಜೀವವನ್ನು ಉಳಿಸಿದೆ.
ಜೆಕ್ ಗಣರಾಜ್ಯದ ಹಿರಿಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ ರೋಮನ್, ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಡಾ ಪೀಟರ್, ಲಾಟ್ವಿಯಾ ಅರಿವಳಿಕೆ ತಜ್ಞ ಮತ್ತು ತೀವ್ರತಾ ತಜ್ಞ ಡಾ ಇವಾರಿಸ್, ಯುನೈಟೆಡ್ ಕಿಂಗ್ಡಮ್ ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ನರ್ಸ್ ಇವಾ ಜರೀನಾ, ಸ್ಲೊವೇನಿಯಾದ ಪೀಡಿಯಾಟ್ರಿಕ್ ಕಾರ್ಡಿಯಾಕ್ ಸರ್ಜನ್ ಡಾ ಮಿಹಾ, ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ.ಹಿರೇಮಠ, ಪೀಡಿಯಾಟ್ರಿಕ್ ಕಾರ್ಡಿಯಾಕ್ ಸರ್ಜನ್ ಡಾ ಬಿ.ಆರ್.ಜಗನ್ನಾಥ್, ಪೀಡಿಯಾಟ್ರಿಕ್ ಕಾರ್ಡಿಯಾಲಜಿಸ್ಟ್ ಡಾ ಅನ್ನಿ ಅರವಿಂದ್ ಉಚಿತ ಆರೋಗ್ಯ ಚಿಕಿತ್ಸಾ ಸೇವೆಯನ್ನು ಒದಗಿಸಿದ್ದಾರೆ.
*ಇಲ್ಲಿ ಹೆಚ್ಚಿನ ತೃಪ್ತಿ
ಹಲವು ದೇಶಗಳಲ್ಲಿ ಆರೋಗ್ಯ ಸೇವೆಯನ್ನು ಕೈಗೊಂಡರೂ ಮುದ್ದೇನಹಳ್ಳಿಯ ಸತ್ಯಸಾಯಿ ಸಂಸ್ಥೆಯಲ್ಲಿ ನಿರ್ವಹಣೆಯ ಕೆಲಸವು ಹೆಚ್ಚಿನ ತೃಪ್ತಿ ನೀಡಿದೆ. ಇದನ್ನು ನಿರಂತರವಾಗಿ ಮುಂದುವರೆಸುವ ಉತ್ಸಾಹದ ಭಾವನೆ ಮೂಡಿದೆ ಎಂದು ಯುನೈಟೆಡ್ ಕಿಂಗ್ಡಮ್ ಹೀಲಿಂಗ್ ಲಿಟಲ್ ಹಾರ್ಟ್ಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಡಾ ಸಂಜೀವ್ ನಿಚಾನಿ ಸಂತಸ ವ್ಯಕ್ತಪಡಿಸಿದರು.