

ಮೈಸೂರು: ಇತ್ತೀಚಿನ ದಿನದಲ್ಲಿ ಯುವಕರಲ್ಲಿಯೂ ಹೃದಯಾಘಾತ ಹೆಚ್ಚಾಗುತ್ತಿದೆ ಎಂದು ಖ್ಯಾತ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ವಿಷಾದಿಸಿದರು.
ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ಪ್ರಕೃತಿ ಅಯುರ್ವೇದ ಪ್ರತಿಷ್ಠಾನ ಯಿಂದ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಡರ್ ಸ್ಟ್ಯಾಂಡಿಂಗ್ ಕಾಡಿರ್ಯಾಂಲಜಿ ಇನ್ ಆಯುರ್ವೇದ ಎಂಬ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಾಯುಮಾಲಿನ್ಯ, ಶಬ್ಧಮಾಲಿನ್ಯ, ಆಹಾರ ಪದ್ಧತಿ, ವಿನಾಶಕಾರಿ ಮನಸ್ಸುಗಳ ಕಾರಣದಿಂದ ಯುವಕದಲ್ಲಿಯೇ ಹೃದಯಾಘಾತ ಹೆಚ್ಚಾಗುತ್ತಿದೆ. ಅವುಗಳಿಂದ ದೂರವಿರಬೇಕು ಎಂದರು.
ಸಾಕಷ್ಟು ಕಡೆ ಹೃದಯಕ್ಕೆ ಸಂಬಂಧಿಸಿದ ನೋವನ್ನು ಗ್ಯಾಸ್ಟ್ರಿಕ್‌ನೊಂದಿಗೆ ಹೋಲಿಸಿಕೊಂಡು, ಮನೆ ಮದ್ದುಗಳನ್ನು ಮಾಡಿಕೊಂಡು ಕೊನೆಗೆ ಆಸ್ಪತ್ರೆಗೆ ಕರೆದ್ಯೋದುರೂ ವೈದ್ಯರು ಏನೂ ಮಾಡಲಾಗದ ಸ್ಥಿತಿ ತಲೆದೋರುತ್ತದೆ ಎಂದರು.
ಆದ್ದರಿಂದ ಹೃದಯಾಘಾತದ ಬಗ್ಗೆ ನಿರ್ಲಕ್ಷ್ಯ ಬೇಡ. ಪ್ರಥಮ ಚಿಕಿತ್ಸೆ ಮತ್ತು ತುರ್ತು ಔಷಧ ಬಗ್ಗೆ ಚರ್ಚಿಸಿ ಅರಿತುಕೊಳ್ಳಬೇಕು. ಆ ಮೂಲಕ ಹೃದಯಾಘಾತವಾದಾಗ ಧೈರ್ಯಗೆಡದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಆರೋಗ್ಯ ಸುಧಾರಣೆಗೆ ವೈಯಕ್ತಿಕವಾಗಿ ಹೃದಯದ ಬಗ್ಗೆ ವಿಶೇಷ ಗಮನ ಕೊಡುವುದು ಮುಖ್ಯ. ಉತ್ತಮ ಆಹಾರ ಸೇವನೆಯೂ ಹೃದಯದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾಗಿ ಹೃದಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಪುರಾತನ ಕಾಲದಿಂದಲೂ ಆಯುರ್ವೇದ ಬಹಳಷ್ಟು ಮಹತ್ವವಿದೆ. ಆಯುರ್ವೇದವು ಕೇವಲ ರೋಗಲಕ್ಷಣಗಳನ್ನು ನಿಗ್ರಹಿಸುವುದಲ್ಲದೆ, ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಿ ಚಿಕಿತ್ಸೆ ನೀಡುವುದು ಸೂಕ್ತ ವೈದ್ಯಕೀಯ ಕ್ರಮವಾಗಿದೆ ಎಂದರು.
ದೇಹದ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದಲ್ಲಿಯೂ ಔಷೋಧೋಪಚಾರವಿವೆ. ಅದನ್ನು ಅರಿತು ಮುನ್ನಡೆಯಬೇಕು ಎಂದು ಹೇಳಿದರು. ಕೃತಿಯ ಲೇಖಕಿ ಡಾ.ಸ್ಫೂರ್ತಿ ಎಸ್.ನಾಯಕ್, ಜಿ.ಎಸ್.ಎಸ್. ಗ್ರೂಪ್ ಸಂಸ್ಥಾಪಕ ಶ್ರೀಹರಿ, ಜೆಎಸ್‌ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ. ಗುರುಬಸವರಾಜ್, ಟ್ರಸ್ಟಿಗಳಾದ ಎಂ.ಆರ್. ಭಾಷ್ಯಂ, ಡಾ.ಶ್ರೀನಿವಾಸನ್ ಭಾರತಿ ಇತರರು ಇದ್ದರು.