ಹೃದಯಾಘಾತದಿಂದ ಯೋಧ ಸಾವು

0101
Published on

ಬೆಳಗಾವಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ಕರ್ತವ್ಯದಲ್ಲಿದ್ದಾಗ ಸಂಭವಿಸಿದ ಹೃದಯಾಘಾತದಿಂದ ಜಿಲ್ಲೆಯ ಯೋಧ ಸೋಮವಾರ ಮೃತಪಟ್ಟಿದ್ದಾರೆ.
ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ಮಂಜುನಾಥ ಪರಮೇಶ್ವರ ತಳವಾರ (31) ಮೃತ ಯೋಧ. 2012ರ ಜೂನ್‌ನಲ್ಲಿ ಸೇನೆ ಸೇರಿದ್ದ ಮಂಜುನಾಥ, ಸಶಸ್ತ್ರ ಸೀಮಾಬಲದ 55ನೇ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸೋಮವಾರ ಹೃದಯಾಘಾತವಾಗಿದೆ ಎಂದು ಸೇನಾಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಮೂರ್ನಾಲ್ಕು ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಂಜುನಾಥ ಅವರಿಗೆ ಎರಡು ವರ್ಷದ ಮಗನಿದ್ದಾನೆ. ರಜೆ ಪಡೆದು ಮಗನೊಂದಿಗೆ ಆಟವಾಡಲು ಬರುತ್ತೇನೆ ಎಂದು ಪತ್ನಿಗೆ ಹಾಗೂ ಮನೆಯವರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಯೋಧನ ಸಾವಿನ ಸುದ್ದಿ ತಿಳಿದು ಗ್ರಾಮದಲ್ಲಿ ದುಃಖ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬುಧವಾರ ಬೆಳಗ್ಗೆ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net