ಹೃದಯಾಘಾತ, ಪೊಲೀಸ್ ಪೇದೆ ಸಾವು

Death 28 June 20
Published on

ಬೆಳಗಾವಿ: ನಗರದ ಎಪಿಎಂಸಿ ಠಾಣೆಯ ಪಿಎಸ್‌ಐ ಕೃಷ್ಣವೇಣಿ ಅವರ ಪತಿ ಹಾಗೂ ಬೆಳಗಾವಿ ನಗರ ಉತ್ತರ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ಸಂಜಯ ಭಂಡಾರಿ (38) ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸಂಜಯ ಭಂಡಾರಿ ಅವರು ಮೂಲತಃ ಹುಕ್ಕೇರಿ ಪಟ್ಟಣದ ಜಾಬಾಪುರ ವಾರ್ಡ್ ನಿವಾಸಿ. ಮನೆಯಲ್ಲಿ ಕಾರ್ಯಕ್ರಮದ ನಿಮಿತ್ತ ಎರಡು ದಿನಗಳ ರಜೆಯ ಮೇಲೆ ಕುಟುಂಬ ಸಮೇತ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮಕ್ಕೆ ತೆರಳಿದ್ದರು. ಅಲ್ಲದೆ, ಅವರು ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಬುಧವಾರ ಬೆಳಗ್ಗೆ ಮನೆಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 2005ರಲ್ಲಿ ಅವರು ಕಾನ್ಸ್‌ಟೇಬಲ್ ಆಗಿ ನೇಮಕಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net