ಹೃದಯಾಘಾತದಿಂದ ಮಹಿಳೆ ಸಾವು

25blrp5-navya
Published on

ಬೇಲೂರು : ಎದೆ ನೋವು ಕಾಣಿಸಿಕೊಂಡು ಚಿಕಿತ್ಸೆಗೆಂದು ಹಾಸನಕ್ಕೆ ತೆರಳುತಿದ್ದ ಸಂದರ್ಭ ಮಾರ್ಗ ಮಧ್ಯದಲ್ಲೇ ಕಂದಾವರ ಗ್ರಾಮದ ಮಹಿಳೆಯೊಬ್ಬರು ಮೃತರಾದ ಘಟನೆ ಶುಕ್ರವಾರ ನಡೆದಿದೆ.ತಾಲೂಕಿನ ಕಂದಾವರದ ನವ್ಯಾ( 47) ಮೃತರು. ಅರೋಗ್ಯವಾಗಿಯೇ ಇದ್ದ ನವ್ಯಾ ಎಂದಿನಂತೆ ಶುಕ್ರವಾರ ಬೆಳಗ್ಗೆ ಮನೆ ಕೆಲಸ ಮಾಡುತ್ತಿದ್ದ ಸಂದರ್ಭ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಅವರ ಪತಿ ಮಹೇಶ್ ಮತ್ತು ಸಹೋದರರು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ರೆಫರ್ ಮಾಡಿದಾಗ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದರು. ಅಂತ್ಯಕ್ರಿಯೆ ಶುಕ್ರವಾರ ಸಂಜೆ ಕಂದಾವರ ಗ್ರಾಮದಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net