ಹೃದಯಾಘಾತದಿಂದ ಧರ್ಮಗುರು ನಿಧನ

darmaguru
Published on

ಮಂಗಳೂರು: ಕಾಟಿಪಳ್ಳ ಇನ್‌ೆಂಟ್ ಮೇರಿ ಚರ್ಚ್‌ನ ಧರ್ಮಗುರು ವಲೇರಿಯನ್ ಲೆವಿಸ್(55) ಭಾನುವಾರ ಚರ್ಚ್‌ನಲ್ಲಿ ಬಲಿ ಪೂಜೆ ಸಂದರ್ಭದಲ್ಲೇ ಹೃದಯಾಘಾತದಿಂದ ನಿಧನರಾದರು.

ಚರ್ಚ್‌ನ ವಾರ್ಷಿಕ ಉತ್ಸವ ಮುಂದಿನ ಬುಧವಾರ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಭಾನುವಾರ ಸಂಜೆ ಬಲಿ ಪೂಜೆ ಮತ್ತು ಪ್ರಸಾದದ ಮೆರವಣಿಗೆ ಜರಗಿತ್ತು. ಮೆರವಣಿಗೆ ಬಳಿಕ ಪರಮ ಪ್ರಸಾದದ ಆರಾಧನೆ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದರು. ಮೂಲತಃ ಪುತ್ತೂರು ನಿವಾಸಿಯಾಗಿದ್ದ ಅವರಿಗೆ 1995ರಲ್ಲಿ ಗುರು ದೀಕ್ಷೆ ಲಭಿಸಿತ್ತು. 2019ರಿಂದ ಕಾಟಿಪಳ್ಳ ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net