ಶಾಲಾ ಮಕ್ಕಳ ಶ್ರವಣ ತಪಾಸಣೆ

mysore
Published on

ಮೈಸೂರು: ವಿಶ್ವ ಶ್ರವಣ ದಿನದ ಅಂಗವಾಗಿ ಮಾನಸಗಂಗೋತ್ರಿಯ ಮೈಸೂರು ವಿವಿ ಶಾಲೆಯಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಗುರುವಾರ ಶಾಲಾ ಮಕ್ಕಳ ಶ್ರವಣ ತಪಾಸಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.


ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಅಂಗವಿಕಲತೆ ಮತ್ತು ಪುನರ್ವಸತಿ ಪ್ರಾದೇಶಿಕ ಸಲಹೆಗಾರ ಡಾ.ತಾಶಿ ಟೋಬ್ಗೆ ಮಾತನಾಡಿ, ಶ್ರವಣ ಆರೋಗ್ಯಕ್ಕಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಸಹಯೋಗದ ಕೇಂದ್ರವಾಗಿ ಪರಿಗಣಿಸಲು ಆಸಕ್ತಿ ಹೊಂದಿದೆ ಎಂದು ತಿಳಿಸಿದರು.


ಆಯಿಷ್‌ನ ನಿರ್ದೇಶಕ ಡಾ.ಎಂ.ಪುಷ್ಪಾವತಿ ಮಾತನಾಡಿ, ಸಂಗೀತವನ್ನು ಕೇಳುವಾಗ ಸುರಕ್ಷಿತಾ ಕ್ರಮ ಅನುಸರಿಸಬೇಕು. ಇದರೊಂದಿಗೆ ಶ್ರವಣವನ್ನು ರಕ್ಷಿಸಿಕೊಳ್ಳಬೇಕು ಎಂದರು.


ಬಿಇಒ ಸಿ.ಎನ್.ರಾಜು, ಮಾನಸಗಂಗೋತ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಕೆ.ಜಗದೀಶ್, ಬಿಆರ್‌ಸಿ ಎಂ.ಬಿ.ಶ್ರೀಕಂಠಸ್ವಾಮಿ, ಪ್ರೊ.ಅಜಿತ್ ಕುಮಾರ್, ಪ್ರೊ.ಎಂ.ಸಂದೀಪ್, ಡಾ.ಸಾರಾಂಶ್ ಜೈನ್ ಇನ್ನಿತರರಿದ್ದರು.


ಶೇ.18ರಷ್ಟು ಮಕ್ಕಳಲ್ಲಿ ಸಮಸ್ಯೆ


ನಗರದ 13 ಶಾಲೆಗಳಲ್ಲಿ ಕೇವಲ 8 ಗಂಟೆಗಳಲ್ಲಿ ಅಂದಾಜು 1200 ಮಕ್ಕಳಿಗೆ ಕಿವಿ ಮತ್ತು ಶ್ರವಣವನ್ನು ಪರೀಕ್ಷಿಸಲಾಯಿತು. ಅವರಲ್ಲಿ ಶೇ.18ರಷ್ಟು ಮಕ್ಕಳು ಕಿವಿ ಮತ್ತು ಶ್ರವಣ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವುದು ಕಂಡುಬಂದಿದೆ. ಅವರಿಗೆ ಶ್ರವಣ ಸಾಧನ ಬಳಕೆಗೆ ಶಿಫಾರಸು ಮಾಡಲಾಗಿದೆ. ಸಮಗ್ರ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಉಚಿತವಾಗಿ ಔಷಧ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net