ಶ್ರವಣೇಂದ್ರ ಆರೋಗ್ಯ ಜಾಗೃತಿ ಅತ್ಯಗತ್ಯ : ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ

New Project (10)
Published on

ಸುಬ್ರಹ್ಮಣ್ಯ: ಆಧುನಿಕ ಯುಗದಲ್ಲಿ ಶಬ್ದಮಾಲಿನ್ಯದಿಂದ ಕಿವಿಯ ಆರೋಗ್ಯ ಕುಂಠಿತವಾಗುತ್ತಿದೆ. ಜನರ ಅಸಡ್ಡೆಯೇ ಇದಕ್ಕೆ ಕಾರಣವಾಗಿದ್ದು, ಶ್ರವಣೇಂದ್ರ ಆರೋಗ್ಯ ಜಾಗೃತಿ ಅತ್ಯಗತ್ಯ ಎಂದು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ನೇತೃತ್ವದಲ್ಲಿ, ಪ್ರೆಸ್‌ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸೆಂಟ್ರಲ್ ಮಂಗಳೂರು ಹಾಗೂ ಟೀಮ್ ಈಶ್ವರ ಮಲ್ಪೆ ಸಹಯೋಗದೊಂದಿಗೆ ಮಠದಲ್ಲಿ ಆಯೋಜಿಸಿದ್ದ ಶ್ರವಣ ಉಚಿತ ತಪಾಸಣೆ ಹಾಗೂ ಶ್ರವಣ ಯಂತ್ರ ವಿತರಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ, ಸುಬ್ರಹ್ಮಣ್ಯ ಪ್ರೆಸ್‌ಕ್ಲಬ್ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಟೀಮ್ ಈಶ್ವರ ಮಲ್ಪೆ ತಂಡ ಸಂಚಾಲಕ ಲವಕುಮಾರ್ ಬಂಗೇರ, ಶ್ರವಣ ತಜ್ಞ ಡಾ.ಪವನ್, ರೋಟರಿ ಮಂಗಳೂರು ಸೆಂಟ್ರಲ್‌ನ ಅನಿಲ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್., ಶಿಬಿರ ಸಂಯೋಜಕ ಲೋಕೇಶ್ ಬಿ.ಎನ್., ರೋಟರಿ ಪೂರ್ವಾಧ್ಯಕ್ಷ ಉಮೇಶ್ ಕೆ.ಎನ್, ಮಾಯಿಲಪ್ಪ ಸಂಕೇಸ, ಪ್ರೆಸ್‌ಕ್ಲಬ್ ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ, ಜತೆ ಕಾರ್ಯದರ್ಶಿ ಸಂತೋಷ್ ಸುಬ್ರಹ್ಮಣ್ಯ, ಶಿವ ಭಟ್, ಮಠದ ಪುರೋಹಿತ ರವೀಂದ್ರ ಭಟ್, ಸಿಬ್ಬಂದಿ ಹರೀಶ್ ಅಗರಿಕಜೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net