ಹುಬ್ಬಳ್ಳಿ: ಇಲ್ಲಿಯ ಔದ್ಯಮಿಕ ನ್ಯಾಯಾಧೀಕರಣದ ಜಿಲ್ಲಾ ನ್ಯಾಯಾಧೀಶ ಮತ್ತು ಪೀಠಾಸೀನಾಧಿಕಾರಿ ರಾಜಕುಮಾರ ಅಮ್ಮಿನಭಾವಿ ಅವರು ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಕಾರ್ವಿುಕ ವಿವಾದಗಳ ವಿಚಾರಣೆಯನ್ನು ಅ. 23 ಹಾಗೂ 24ರಂದು ಬೆಳಗ್ಗೆ 11ಗಂಟೆಗೆ ಕಲಬುರಗಿ ಪ್ರವಾಸಿ ಮಂದಿರದಲ್ಲಿ ನಡೆಸಲಿದ್ದಾರೆ ಎಂದು ನ್ಯಾಯಾಧೀಕರಣದ ಪ್ರಕಟಣೆ ತಿಳಿಸಿದೆ.