ಸಕಾಲಿಕ ಆರೈಕೆಯಿಂದ ಶ್ರವಣದೋಷ ನಿವಾರಣೆ: ಇಎನ್‌ಟಿ ತಜ್ಞ ಡಾ.ಎಚ್.ಎ.ದತ್ತಾತ್ರಿ

22
Published on

ಮೈಸೂರು: ಸರಿಯಾದ ಮತ್ತು ಸಕಾಲಿಕ ಆರೈಕೆಯಿಂದ ಶೇ. 50 ಶ್ರವಣದೋಷ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಮಣಿಪಾಲ್ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಎಚ್.ಎ.ದತ್ತಾತ್ರಿ ಹೇಳಿದರು.

ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಇಎನ್‌ಟಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆಯಲ್ಲಿ ಶ್ರವಣ ಸಮಸ್ಯೆ ಕುರಿತು ಆಯೋಜಿಸಿದ್ದ ಸಮಾಲೋಚನೆಯಲ್ಲಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಶ್ರವಣದೋಷವು ಆತಂಕಕಾರಿ ದರದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ಸುಮಾರು 63 ಮಿಲಿಯನ್ ಜನರು ಶ್ರವಣ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಅಂಕಿ-ಅಂಶ ಹೇಳುತ್ತದೆ ಎಂದರು.

ಶ್ರವಣದೋಷದ ಹಲವು ಪ್ರಕರಣಗಳಿಗೆ ಚಿಕಿತ್ಸೆ ನೀಡಬಹುದಾದರೂ ಅಥವಾ ನಿರ್ವಹಿಸಬಹುದಾದರೂ, ಹೆಚ್ಚಿನ ಜನರಿಗೆ ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಬಗ್ಗೆ ತಿಳಿದಿಲ್ಲ. ಇದು ಶ್ರವಣದೋಷವನ್ನು ನಿರ್ವಹಿಸಲು ಚಿಕಿತ್ಸೆಗಳು ಮತ್ತು ಶ್ರವಣ ಸಾಧನಗಳ ಬಳಕೆಯ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅಗತ್ಯವನ್ನು ತೋರಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಮಣಿಪಾಲ್ ಆಸ್ಪತ್ರೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮತ್ತೋರ್ವ ವೈದ್ಯ ಡಾ.ಪ್ರವೀಣ್ ಕುಮಾರ್ ಮಾತನಾಡಿ, ಶ್ರವಣ ಆರೈಕೆಯ ಪ್ರಾಮುಖ್ಯತೆ ಮತ್ತು ಅದರ ವ್ಯಾಪಕ ಪರಿಣಾಮದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಶ್ರವಣ ಶಕ್ತಿಯ ಆರೈಕೆ ಕೇವಲ ಶಬ್ದಗಳನ್ನು ಕೇಳುವುದರ ಬಗ್ಗೆ ಮಾತ್ರವಲ್ಲ, ಜೀವನದ ಗುಣಮಟ್ಟವನ್ನು ಸುಧಾರಿಸುವ ಬಗ್ಗೆಯೂ ಆಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net