ಇನ್ನರ್ ವೀಲ್ ನಿಂದ ಶ್ರವಣ ಸಾಧನ ಕೊಡುಗೆ

20Adarshkdga2 - Copy
Published on

ಮಡಿಕೇರಿ: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಶ್ರವಣ ದೋಷವಿದ್ದ ಬಾಲಕನೋರ್ವನಿಗೆ ಶ್ರವಣ ಸಾಧನವನ್ನು ನೀಡಲಾಯಿತು.


ಮಡಿಕೇರಿಯ ತರಕಾರಿ ವ್ಯಾಪಾರಸ್ಥರ ೧೧ ವರ್ಷದ ಮಗ ಹುಟ್ಟಿನಿಂದಲೇ ಶ್ರವಣ ದೋಷದಿಂದ ಸಮಸ್ಯೆ ಎದುರಿಸುತ್ತಿದ್ದ ಪರಿಣಾಮ ಬಾಲಕನಿಗೆ ಶ್ರವಣ ತಜ್ಞ ಅಚ್ಚಯ್ಯ ನೆರವಿನೊಂದಿಗೆ ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಶ್ರವ್ಯ ಉಪಕರಣ ನೀಡಲಾಯಿತು.


ಮಡಿಕೇರಿಯ ಬಾಲಕರ ಬಾಲಮಂದಿರದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅಚ್ಚಯ್ಯ, ಶ್ರವಣ ದೋಷ ಮತ್ತು ನಿವಾರಣೆ ಕುರಿತಂತೆ ಮಾಹಿತಿ ನೀಡಿದರು.


ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್ ಮಾತನಾಡಿ, ೧೧ ವರ್ಷಗಳ ಕಾಲ ಕಿವಿ ಸರಿಯಾಗಿ ಕೇಳದೇ ಸಮಸ್ಯೆ ಅನುಭವಿಸುತ್ತಿದ್ದ ಬಾಲಕನ ನೆರವಿಗೆ ಇನ್ನರ್ ವೀಲ್ ಸಂಸ್ಥೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಬಾಲಕನೂ ಎಲ್ಲರಂತೆ ಕೇಳಬಲ್ಲ ಎಂಬುದೇ ಮನಸ್ಸಿಗೆ ತೃಪ್ತಿ ತರುವ ವಿಚಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಇನ್ನರ್ ವೀಲ್ ಜಿಲ್ಲಾ ಉಪಾಧ್ಯಕ್ಷೆ ಪೂರ್ಣಿಮಾ ರವಿ, ಮಡಿಕೇರಿ ಇನ್ನರ್ ವೀಲ್ ಉಪಾಧ್ಯಕ್ಷೆ ನಮಿತಾ ರೈ, ಸದಸ್ಯೆಯರಾದ ಉಮಾಗೌರಿ, ಮಲ್ಲಿಗೆ ಪೈ, ಲಕ್ಷ್ಮಿ ಈಶ್ವರ ಭಟ್, ಲತಾಚಂಗಪ್ಪ, ಕನ್ನು ದೇವರಾಜ್, ಜ್ಯುಬಿ ಗಣಪತಿ, ಬೊಳ್ಳು ಮೇದಪ್ಪ, ಅಗ್ನೇಸ್ ಮುತ್ತಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net