

ಚಿತ್ರದುರ್ಗ: ಜಮೀನು ಒಂದರಲ್ಲಿ ಕಂತೆ ಕಂತೆ ಹಣ ನೋಡಿದ ಗ್ರಾಮಸ್ಥರು ಅಚ್ಚರಿಗೀಡಾದ ಘಟನೆ ಚಳ್ಳಕೆರೆ ತಾಲೂಕಿನ ಬುಕ್ಲೂರಹಳ್ಳಿಯಲ್ಲಿ ಗುರುವಾರ ನಡೆದಿದೆ.
ದಿಕ್ಕು ದೆಸೆ ಇಲ್ಲದೆ ಅನಾಥವಾಗಿ ಬಿದ್ದಿದ್ದ ರಾಶಿ ಹಣವನ್ನು ನೋಡಿದರೆ ಯಾರಿಗೇ ತಾನೇ ಆಶ್ಚರ್ಯವಾಗುವುದಿಲ್ಲ ಹೇಳಿ. ಅಲ್ಲದೆ, ಕರೊನಾ ವೈರಸ್ ಕಾಲದಲ್ಲಿ ಜನರು ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಮುಟ್ಟಲು ಹೆದರಿದಂತ ಅನೇಕ ಘಟನೆಗಳು ಸಹ ಈ ಹಿಂದೆ ವರದಿಯಾಗಿವೆ. ಒಮ್ಮೆಲೆ ಭಾರಿ ಹಣ ನೋಡಿದ ಜನರಿಗೆ ಮುಂದೇ ಏನಾದರೂ ಸಮಸ್ಯೆ ಆಗುವ ಮೊದಲು ಪೊಲೀಸರಿಗೆ ಮಾಹಿತಿ ತಿಳಿಸಿಬಿಡೋಣ ಎಂದು ಚಿತ್ರದುರ್ಗದ ತಳಕು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಣದ ಪರಿಶೀಲನೆ ನಡೆಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಇನ್ನು ಬುಕ್ಲೂರಹಳ್ಳಿ ಬಳಿ 3 ದಿನದ ಹಿಂದೆ ದಿಲೀಪ್ ಬ್ಯುಲ್ಡ್ ಕಾನ್ ಕಂಪನಿಯಲ್ಲಿ 36ಲಕ್ಷ ರೂ. ಕಳುವಾಗಿತ್ತು. ಅದೇ ಹಣವನ್ನು ಮತ್ತೆ ವಾಪಾಸ್ ತಂದು ಇಟ್ಟಿ ಹೋಗಿದ್ದಾರೆನ್ನಲಾಗಿದೆ. ದಿಲೀಪ್ ಕಾನ್ ಕಚೇರಿ ಹಿಂಭಾಗದ ಜಮೀನಿನಲ್ಲೇ ಹಣ ಪತ್ತೆಯಾಗಿದೆ. (ದಿಗ್ವಿಜಯ ನ್ಯೂಸ್)