ಆರೋಗ್ಯವಂತ ಯುವಜನತೆ ರಕ್ತದಾನಕ್ಕೆ ಮುಂದಾಗಿ

bjp blood donation
ಶಿವಮೊಗ್ಗದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ ನಡೆಯಿತು. ಬಿ.ವೈ.ರಾಘವೇಂದ್ರ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಎನ್.ಜೆ.ನಾಗರಾಜ್, ದರ್ಶನ್, ನಾಗರಾಜ್, ಮೋಹನ್ ರೆಡ್ಡಿ, ಮಂಜುನಾಥ್, ಅಭಿ, ಕಾರ್ತಿಕ್ ಇದ್ದರು.
Published on

ಶಿವಮೊಗ್ಗ: ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಈವರೆಗೆ ಕೃತಕ ರಕ್ತ ಉತ್ಪಾದನೆ ಮಾಡಲಾಗಿಲ್ಲ. ಒಬ್ಬ ರಕ್ತದಾನ ಮಾಡುವುದರಿಂದ ನಾಲ್ವರ ಜೀವ ಉಳಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ನಗರದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಏರ್ಪಡಿಸಿದ್ದ ಸೇವಾ ಪಾಕ್ಷಿಕದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತದಾನದಿಂದ ದೇಹ ಹಗುರವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ರಕ್ತ ದಾನದ ಬಳಿಕ ಕೇವಲ ಒಂದೂವರೆ ಗಂಟೆಯೊಳಗೆ ಮತ್ತೆ ಉತ್ಪಾದನೆಯಾಗುತ್ತದೆ. ರಕ್ತದಾನದಿಂದ ಹೃದಯಾಘಾತ ಕಡಿಮೆಯಾಗುತ್ತದೆ. ಕ್ಯಾನ್ಸರ್ ಕೂಡ ಬರುವುದಿಲ್ಲ ಎಂದು ತಿಳಿಸಿದರು.

ನಿಸ್ವಾರ್ಥ ಸೇವೆಯಿಂದ ಲಭಿಸಿದ ಆತ್ಮತೃಪ್ತಿ ರಕ್ತದಾನದಿಂದ ಮೂಲಕ ಸಿಗುತ್ತದೆ. ಪ್ರಪಂಚದಲ್ಲಿ ಒಂದು ನಿಮಿಷಕ್ಕೆ 1,200 ಬಾಟಲಿ ರಕ್ತದ ಅವಶ್ಯಕತೆ ಇದ್ದು, ಭಾರತದಲ್ಲಿ ಒಂದು ನಿಮಿಷಕ್ಕೆ 100 ಯೂನಿಟ್ ರಕ್ತ ಬೇಕಿದೆ. ಪ್ರತಿ ನಿಮಿಷಕ್ಕೆ ರಕ್ತ ಸಿಗದೆ 12 ಜನ ಸಾಯುತ್ತಾರೆ ಎಂದರು.

ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, ಯುವಜನರು ಹೆಚ್ಚಿನ ರಕ್ತದಾನ ಮಾಡಬೇಕು. ಹವಾಮಾನ ವೈಪರೀತ್ಯದಿಂದ ಮಲೆನಾಡಿನಲ್ಲಿ ಅನೇಕ ಕಾಯಿಲೆಗಳು ಬರುತ್ತಿವೆ. ರಕ್ತದ ತುರ್ತು ಅಗತ್ಯವಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ನೆರವಾಗಬೇಕು ಎಂದು ಮನವಿ ಮಾಡಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷ ರಾಹುಲ್ ಬಿದಿರೆ, ಪ್ರಮುಖರಾದ ಎನ್.ಜೆ.ನಾಗರಾಜ್, ದರ್ಶನ್, ನಾಗರಾಜ್, ಮೋಹನ್ ರೆಡ್ಡಿ, ಮಂಜುನಾಥ್, ಅಭಿ, ಕಾರ್ತಿಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net