ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನ

VV DIGITAL
Published on

ನರಗುಂದ: ತಾಲೂಕಿನ ಶಿರೋಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗ್ರಾಮದ ಮಹಿಳೆಯರಿಗೆ ಬುಧವಾರ ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು. ಶಿರೋಳ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪಂಕಜಾ ಮೈತ್ರಿ ಮಾತನಾಡಿ, ತಾಲೂಕಿನಾದ್ಯಂತ ಸೆ. 17ರಿಂದ ಅಕ್ಟೋಬರ್ 2ರವರೆಗೆ ಮಹಿಳೆಯರ ವಿವಿಧ ಕಾಯಿಲೆಗಳ ಉಚಿತ ತಪಾಸಣೆ, ಚಿಕಿತ್ಸೆ, ಆರೋಗ್ಯ ಶಿಕ್ಷಣ ಮೊದಲಾದ ಚಟುವಟಿಕೆಯ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದರು. ಶಿಬಿರದಲ್ಲಿ 300 ಜನ ಪಾಲ್ಗೊಂಡು ವಿವಿಧ ಆರೋಗ್ಯ ಸೌಲಭ್ಯ ಪಡೆದುಕೊಂಡರು. ನರಗುಂದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಜಡೇಶ ಭದ್ರಗೌಡ್ರ, ತಾಲೂಕು ಆರೋಗ್ಯಾಧಿಕಾರಿ ಡಾ. ರೇಣುಕಾ ಕೊರವನವರ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಡಾ. ಜಗದೀಶ ಎಂ, ಡಾ.ಫೌಜೀಯಾ ಶಿವಳ್ಳಿ, ಡಾ. ಜ್ಯೋತಿ ಚಿತಾಳೆ, ಡಾ. ರೂಪಾ ಯರಗುಪ್ಪಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net