

ಮುಳಬಾಗಿಲು: ದುಶ್ಚಟಗಳಿಂದ ಅನಾರೋಗ್ಯಕ್ಕೆ ಒಳಗಾದವರನ್ನು ಧರ್ಮಸ್ಥಳ ಗ್ರಾವಾಭಿವೃದ್ಧಿ ಸಂಸ್ಥೆಯು ಮದ್ಯವರ್ಜನ ಶಿಬಿರಗಳ ಮೂಲಕ ಮನ ಪರಿವರ್ತನೆ ಮಾಡಿ, ಅವರನ್ನು ಮುಖ್ಯವಾಹನಿಗೆ ತರುತ್ತಿರುವುದು ಮಹತ್ವದ ಕಾರ್ಯ ಎಂದು ತಹಸೀಲ್ದಾರ್ ವಿ.ಗೀತಾ ಹೇಳಿದರು.
ತಾಲೂಕಿನ ಶಿವಕೇಶವನಗರದಲ್ಲಿನ ರಾ.ಹೆ. 75ರ ಸಮೀಪದ ಶ್ರೀ ವಿಶ್ವಕರ್ಮ ಶ್ರೀ ಕಾಳಿಕಾ ಕಾಮಟೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಸಂಸ್ಥೆ ಹಾಗೂ ಜನಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸವಾರೋಪದಲ್ಲಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಹಲವು ಸವಾಜಮುಖಿ ಕಾರ್ಯಗಳನ್ನು ನೈಜ ಹಾಗೂ ಅಚ್ಚುಕಟ್ಟುತನದಿಂದ ವಾಡಿಕೊಂಡು ಬರುತ್ತಿದೆ. ಅದರೊಟ್ಟಿಗೆ ಮದ್ಯವರ್ಜನದಂತ ವಾನವೀಯ ಶಿಬಿರಗಳು ಆರೋಗ್ಯವಂತ ಸವಾಜ ನಿರ್ವಾಣಕ್ಕೆ ದಾರಿದೀಪವಾಗಿವೆ ಎಂದರು.
ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ ವಾತನಾಡಿ, ರಾಜ್ಯದಲ್ಲಿ ಇದುವರೆಗೆ 1926ನೇ ಮದ್ಯವರ್ಜನ ಶಿಬಿರದ ಮೂಲಕ ಸುವಾರು 1.30 ಲಕ್ಷ ಮಂದಿ ವ್ಯಸನಮುಕ್ತರಾಗಿದ್ದಾರೆ. ಮುಳಬಾಗಿಲು ಶಿಬಿರಕ್ಕೆ ಆರಂಭದಲ್ಲಿ 55 ಮಂದಿ ಸೇರ್ಪಡೆಗೊಂಡಿದ್ದರು. ಅವರಲ್ಲಿ 10 ಮಂದಿಗೆ ಆರೋಗ್ಯ ಸಮಸ್ಯೆ ಇರುವುದು ಕಂಡುಬಂದಿದ್ದು, ಅವರನ್ನು ಹೊರತುಪಡಿಸಿ 45 ಮಂದಿ 8 ದಿನಗಳ ಶಿಬಿರದಲ್ಲಿ ಪಾಲ್ಗೊಂಡು, ವ್ಯಸನದಿಂದ ಮುಕ್ತರಾಗಿದ್ದಾರೆ ಎಂದರು.
ರಾಜ್ಯ ವಾವು ಮಂಡಳಿ ವಾಜಿ ಅಧ್ಯಕ್ಷ ಎಂ.ಕೆ.ವಾಸುದೇವ್, ಬೈರಕೂರು ಗ್ರಾಪಂ ಅಧ್ಯಕ್ಷ ಅಶೋಕ್, ಸವಾಜ ಸೇವಕ ಕೋಲಾರದ ನಂಜುಂಡ ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾ ಉಪಾಧ್ಯಕ್ಷ ಎ.ಅಪ್ಪಾಜಿಗೌಡ, ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ತಾಲೂಕು ಯೋಜನಾಧಿಕಾರಿ ಸಿ.ಹರೀಶ್ ಕುವಾರ್, ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಶಿಬಿರಾಧಿಕಾರಿ ದಿವಾಕರ್ ಪೂಜಾರಿ, ಆರೋಗ್ಯ ಸಹಾಯಕಿ ಫಿಲೋಮೀನಾ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಸ್.ಸಂತೋಷ್ ಕುವಾರ್ ಇದ್ದರು.