ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ

14blrp4.
ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಾಗವಹಿಸಿದ್ದ ಗಣ್ಯರು.
Published on

ಬೇಲೂರು: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಬೇಲೂರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ರಕ್ತದಾನ ಉಚಿತ ಶಿಬಿರವನ್ನು ರಕ್ತ ನಿಧಿ ಕೇಂದ್ರದ ಪ್ರಯೋಗ ಶಾಲಾ ಆವರಣ ಆಯೋಜಿಸಲಾಗಿತ್ತು. ಶಿಬಿರದಲ್ಲಿ 30 ಜನರು ರಕ್ತದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಯಿತು.

ಹಾಸನ ಹಿಮ್ಸ್ ರಕ್ತ ನಿಧಿ ಕೇಂದ್ರದ ಡಾ.ನಾಗಲಕ್ಷ್ಮೀ ಮಾತನಾಡಿ, ರಕ್ತ ಕೊಡಿ ಜೀವಗಳನ್ನು ಉಳಿಸಿ ಎಂಬ ಘೋಷವಾಕ್ಯದಂತೆ ಇಂದು 18 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ ಆರೋಗ್ಯವಂತ ಮಹಿಳೆ ಹಾಗೂ ಪುರಷರು ರಕ್ತದಾನ ಮಾಡಬಹುದಾಗಿದೆ. ನಾವು ಕೊಟ್ಟಂತಹ ಒಂದು ಬಾಟಲ್ ರಕ್ತ ನಾಲ್ಕು ಜನರ ಜೀವ ಉಳಿಸುತ್ತದೆ. ಇತ್ತಿಚೀನ ದಿನಗಳಲ್ಲಿ ಹೆರಿಗೆ, ಅಪಘಾತ ಹಾಗೂ ಡೆಂಘಿಯಂತಹ ಕಾಯಿಲೆಗಳು ಹೆಚ್ಚಾದಾಗ ಎಲ್ಲರಿಗೂ ರಕ್ತದ ಬಗ್ಗೆ ತಿಳಿಯುತ್ತದೆ. ಆದ್ದರಿಂದ ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಇತರರ ಜೀವ ಉಳಿಸಿದ ಪುಣ್ಯ ಬರುತ್ತದೆ. ಜತೆಗೆ ಉತ್ತಮ ಅವಕಾಶ ಸಿಕ್ಕಂತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಬೇಲೂರಿನ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಶಿಬಿರ ಆರೋಜಿಸಿ ದಾನಿಗಳಿಂದ ಸ್ವೀಕರಿಸುತ್ತಿದ್ದೇವೆ. ರಕ್ತದಾನ ಮಾಡಿದ ದಾನಿಗಳಿಗೆ ಮತ್ತು ಭಾಗವಹಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ 30 ಯೂನಿಟ್ ರಕ್ತದಾನ ಮಾಡಿದರು.

ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್, ವೈದ್ಯಾಧಿಕಾರಿಗಳಾದ ಡಾ.ಸುಧಾ, ಡಾ.ಸುದರ್ಶನ್, ಡಾ.ರಾಜೀವ್, ಡಾ.ವೆಂಕಟೇಶ್, ಡಾ.ರಾಜೇಶ್, ಹಿರಿಯ ಸುರಕ್ಷಣಾಧಿಕಾರಿ ಮಂಗಳಮ್ಮ, ಆಪ್ತ ಸಮಾಲೋಚಕ ಧರಣೇಶ್, ಪ್ರಯೋಗ ಶಾಲಾ ತಂತ್ರಜ್ಞ ರೇಣುಕಪ್ರಸಾದ್, ರಕ್ತ ನಿಧಿ ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞೆ ಸೀಮಾ, ಹಾಸನ ಹಿಮ್ಸ್‌ನ ರಕ್ತ ನಿಧಿ ಕೇಂದ್ರದ ಆಪ್ತ ಸಮಾಲೋಚಕಿ ಲೀಲಾವತಿ, ಪ್ರಯೋಗ ಶಾಲಾ ತಂತ್ರಜ್ಞೆ ಗೀತಾ, ಭಾಗ್ಯಾ, ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net