ಆರೋಗ್ಯವಂತರು ರಕ್ತದಾನಮಾಡಿ ಜೀವ ಉಳಿಸಿ

Healthy people should donate blood and save lives.
Published on

ಮಹಾಲಿಂಗಪುರ:"ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ' ಎಂಬಂತೆ ಆರೋಗ್ಯವಂತ ಯುವಕರು ರಕ್ತದಾನ ಮಾಡಿದರೆ ಅವರ ದೇಹದಲ್ಲಿ ಮತ್ತೆ ರಕ್ತ ಉತ್ಪತ್ತಿಯಾಗುತ್ತದೆ. ಅಲ್ಲದೆ ರಕ್ತದಾನ ಮಾಡಿದ ಪುಣ್ಯ ಅವರಿಗೆ ಸಿಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.ಸ್ಥಳಿಯ ಟೊಣಪಿನಾಥ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತೇರದಾಳ ಮತೇತ್ರ ಹಾಗೂ ಸ್ಥಳಿಯ ಟಕ ಹಾಗೂ ಸೈದಾಪುರ ವಿಭಾಗದ ಜಿ.ಪಂ. ವತಿಯಿಂದ ಸೋಮವಾರ ಕ್ರಾಂತಿಕಾರಿ ಭಗತ್​ಸಿಂಗ್​ ಅವರ 118ನೇ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವುದರಿಂದ ಯುವಕರು ಆರೋಗ್ಯವಂತ ವ್ಯಕ್ತಿಗಳು ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಯುವಕರು ದುಶ್ಚಟಗಳನ್ನು ತ್ಯಜಿಸಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.ದೇಶದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ ಪರಿಸರ ದಿನಾಚರಣೆ ರಕ್ತದಾನ ಸ್ವಚ್ಛ ಭಾರತ ಸೇರಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಯುವಕರು ಸಾಧಕರನ್ನು ಅನುಸರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಮೊದಲು ನಾವು ನಮ್ಮ ಕರ್ತವ್ಯ ನಿರ್ವಹಿಸಿ ನಂತರ ಹಕ್ಕುಗಳನ್ನು ಕೇಳಬೇಕು. ಬಿಜೆಪಿ ಸೇವೆಗೆ ಸದಾ ಹೆಸರಾದ ಪ. ಸಾಮಾಜಿಕ ಸೇವೆ ಮತ್ತು ಜನೋಪಯೋಗಿ ಸೇವಾ ಕಾರ್ಯಕ್ರಮಗಳ ಮೂಲಕ ಬಿಜೆಪಿ ಮುಖಂಡರು ಕಾರ್ಯಕರ್ತರು ನಿರಂತರವಾಗಿ ರಾಷ್ಟ್ರ ಸೇವೆ ಸಾಮಾಜಿಕ ಸೇವೆ ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.ಅಂದಾಜು 70 ಜನರು ರಕ್ತದಾನ ಮಾಡಿದರು. ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಬಸನಗೌಡ ಪಾಟೀಲ, ಬಿಜೆಪಿ ನಗರ ಟಕದ ಅಧ್ಯ ಶಂಕರಗೌಡ ಪಾಟೀಲ, ಮುಖಂಡರಾದ ಈರಪ್ಪ ದಿನ್ನಿಮನಿ, ಜಿ.ಎಸ್​. ಗೊಂಬಿ, ಸಿದ್ದುಗೌಡ ಪಾಟೀಲ, ಶೇಖರ ಅಂಗಡಿ, ಬಸವರಾಜ ನಾಗನೂರ, ಲಕ್ಕಪ್ಪ ಪಾಟೀಲ, ಮಹಾಲಿಂಗಪ್ಪ ಕೊಲ್ಲೊಳ್ಳಿ, ಅಶೋಕಗೌಡ ಪಾಟೀಲ, ಪ್ರಕಾಶ ಅರಳಿಕಟ್ಟಿ, ಮಲ್ಲಪ್ಪ ಗುರವ ಇತರರು ಇದ್ದರು.

ಮಹಾಲಿಂಗಪುರದ ಟೊಣಪಿನಾಥ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಜಿ.ಪಂ. ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು. ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net