

ನೆಲಮಂಗಲ : ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಪರ್ಯಾಯವಾಗಿ ಯಾವುದನ್ನೂ ತಯಾರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ರಕ್ತದಾನ ಮಾಡುವುದೇ ಉಪಯುಕ್ತ ಮಾರ್ಗವಾಗಿದೆ ಎಂದು ರೋಟರಿ ನೂತನ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.
ನಗರದ ಹರ್ಷ ನರ್ಸಿಂಗ್ ಕಾಲೇಜಿನಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಹಾಗೂ ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರ ಮಾಡಿಕೊಂಡು ಬರುತ್ತಿದೆ. ಅದರಲ್ಲಿ ರಕ್ತದಾನ ಶಿಬಿರವೂ ಒಂದು. ಅಗತ್ಯ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ರಕ್ತ ಸಿಗಬೇಕೆಂಬುದೇ ನಮ್ಮ ಉದ್ದೇಶ. ಆದ್ದರಿಂದ ಈ ಕಾರ್ಯ ನಿರಂತರವಾಗಿ ನಡೆಸಲಾಗುತ್ತಿದೆ. ಅರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬೇಕು. ಯಾರೂ ಭಯ ಪಡುವ ಅವಶ್ಯಕತೆಯಿಲ್ಲ ಹಾಗೂ ಯಾವುದೇ ತೊಂದರೆಯಿಲ್ಲ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತಿದೆ. ಇದರಿಂದ ಆರೋಗ್ಯವೂ ಸುಧಾರಿಸುತ್ತದೆ. ಸಾವು&ನೋವಿನಲ್ಲಿರುವ ಜನರಿಗೆ ಜೀವದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಹರ್ಷ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲ ಡಾ.ಜಯಪ್ರಕಾಶ್ ಮಾತನಾಡಿ, ಇಂದಿಗೂ ಜನರಲ್ಲಿ ರಕ್ತದಾನ ಬಗ್ಗೆ ಅಪನಂಬಿಕೆ ಇದ್ದು, ರಕ್ತದಾನ ಮಾಡಲು ಹಿಂಜರಿಯುತಿರುವುದು ಹಾಗೂ ಮೂಡ ನಂಬಿಕೆಗೆ ಒಳಗಾಗುತ್ತಿರುವುದು ವಿಪರ್ಯಾಸ. ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಸಲಹೆ ನೀಡಿದರು.
ರೋಟರಿ ಸಂಸ್ಥೆ ಸಂಸ್ಥಾಪಕ ಎಚ್.ಜಿ.ರಾಜು, ನೂತನ ಕಾರ್ಯದರ್ಶಿ ಆರ್.ರವಿಕುಮಾರ್, ನಿಟಕ ಪೂರ್ವ ಅಧ್ಯಕ್ಷ ಸುರೇಂದ್ರನಾಥ್, ಖಜಾಂಚಿ ಎಸ್.ಗಂಗರಾಜು, ಮಾಜಿ ಅಧ್ಯಕ್ಷ ಸಿ.ಜಿ.ಮಂಜುನಾಥ್ಗೌಡ, ಮಂಜುನಾಥ್ ಪಾಟೀಲ್, ಎನ್.ಜಿ.ನಾಗರಾಜು, ಎಂ.ಟಿ.ನವೀನ್ಕುಮಾರ್, ನಿರ್ದೇಶಕ ಕೆ.ಎಸ್.ಲೋಕೇಶ್, ಹನುಮಂತರಾಜು, ರಾಜಶೇಖರ್, ಸೋಮಶೇಖರ್, ಎಲ್.ಕುಮಾರ್, ರುದ್ರೇಗೌಡ, ಮುರುಳಿ, ರವಿಕುಮಾರ್, ರಾಮಕೃಷ್ಣಪ್ಪ, ಇನ್ನರ್ ವ್ಹೀಲ್ ನೂತನ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಕಾರ್ಯದರ್ಶಿ ಮಂಜುಳಾ ಸಿದ್ದರಾಜು, ಮಾಜಿ ಅಧ್ಯೆ ಶಾರದಾ ಸುಂದರೇಶ್, ಹರ್ಷ ಕಾಲೇಜು ಪ್ರಾಂಶುಪಾಲ ಡಾ.ಸತ್ಯಾಶ್ರೀ, ಡಾ.ನೂಪೂರ್, ಉಪ ಪ್ರಾಂಶುಪಾಲ
ವಿಜಯ್, ಚಿಕ್ಕೇಗೌಡ ಇದ್ದರು.
ರಕ್ತದಾನ ಶಿಬಿರ : ರೋಟರಿ ಸಂಸ್ಥೆ ಹಾಗೂ ಹರ್ಷ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ರೋಟರಿ ಸಂಸ್ಥೆ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಸೇರಿ ವಿವಿಧ ರಕ್ತದಾನಿಗಳಿಯಿಂದ ಸುಮಾರು 59 ಯೂನಿಟ್ ರಕ್ತ ಸಂಗ್ರಹವಾಗಿದೆ ಎಂದು ರೋಟರಿ ಸಂಸ್ಥೆ ನೂತನ ಕಾರ್ಯದರ್ಶಿ ಆರ್.ರವಿಕುಮಾರ್ ಮಾಹಿತಿ ನೀಡಿದರು.