ಆರೋಗ್ಯಯುತ ಜೀವನಕ್ಕೆ ಯೋಗ ಅಗತ್ಯ

16KADABI1
Published on

ಕಡಬಿ: ಪ್ರಸ್ತುತ ದಿನಗಳಲ್ಲಿ ಆಹಾರ ಪದ್ಧತಿ ಹಾಗೂ ಜೀವನದ ಒತ್ತಡದಿಂದಾಗಿ ಹೃದಯ ಸಂಬಂಧಿ ಖಾಯಿಲೆ ಹೆಚ್ಚುತ್ತಿವೆ. ಹೀಗಾಗಿ, ಆರೋಗ್ಯಯುತ ಜೀವನಕ್ಕಾಗಿ ಯೋಗ ಅಗತ್ಯವಾಗಿದೆ ಎಂದು ೇತ್ರ ಆರೋಗ್ಯ ಶಿಣಾ-ಧಿಕಾರಿ ಐ.ಆರ್​.ಗಂಜಿ ಹೇಳಿದರು.

ಸಮೀಪದ ಗೊರಗುದ್ದಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಹಯೋಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಆರೋಗ್ಯ ನಿರೀಣಾಧಿಕಾರಿ ಯು.ಬಿ.ಬೆಟಗೇರಿ ಮಾತನಾಡಿ, ಕುಷ್ಠರೋಗದ ಲಣ, ತಡೆಗಟ್ಟುವಿಕೆ ಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು. ಈರಪ್ಪ ಹವಳೆಪ್ಪನವರ, ಗ್ರಾಪಂ ಅಧ್ಯ ಪ್ರಕಾಶ ಸುಣಧೋಳಿ, ತಾಪಂ ಸಹಾಯಕ ನಿರ್ದೇಶಕ ಆರ್​.ರಕ್ಕಸಗಿ, ಮಾದೇವಿ ಗುಗ್ಗರನಟ್ಟಿ, ಇಕ್ಬಾಲ್​ ಭಾಗವಾನ, ವೀರೇಶ ನಾಯಕ, ನಸೀಮಾ ಶೇಖ, ರೂಪಾ ಹುಗ್ಗಿ ಇತರರಿದ್ದರು. ಮಂಜುನಾಥ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net