ಮಕ್ಕಳ ಶೈಕ್ಷಣಿಕ ಉನ್ನತಿಗೆ ಆರೋಗ್ಯಯುತ ನೇತ್ರ ಅಗತ್ಯ

FREE EYE CHECKUP CAMP IN KUMATA
Published on

ಕುಮಟಾ: ಮಕ್ಕಳ ಶೈಕ್ಷಣಿಕ ಉನ್ನತಿಗೆ ಆರೋಗ್ಯಕರ ನೇತ್ರಗಳು ಮಹತ್ವವುಳ್ಳದಾಗಿದೆ. ಲಯನ್ಸ್ ಕ್ಲಬ್ ನಿರಂತರವಾಗಿ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದ್ದು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಲಯನ್ಸ್ ಅಧ್ಯಕ್ಷ ಡಾ.ನಾಗರಾಜ ಭಟ್ ಹೇಳಿದರು.

ತಾಲೂಕಿನ ಬಾಡ-ಕಾಗಲದ ಜನತಾ ವಿದ್ಯಾಲಯದಲ್ಲಿ ಲಯನ್ಸ್ ರೇವಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನೇತ್ರ ತಜ್ಞ ಡಾ. ಮನೋಜ ಅವರು ಮಕ್ಕಳಲ್ಲಿ ಕಾಡುವ ಕಣ್ಣಿನ ತೊಂದರೆಗಳು, ಅದರಿಂದ ಶೈಕ್ಷಣಿಕವಾಗಿ ಉಂಟಾಗುವ ಸಮಸ್ಯೆಗಳ ಕುರಿತು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಸಂದೇಶ ಉಳ್ಳಿಕಾಶಿ, ರಾಷ್ಟ್ರ ನಿರ್ಮಾಣ ಹಾಗೂ ಸಾಮಾಜಿಕ ಸೇವಾ ಅಭಿವೃದ್ಧಿ ಕಾರ್ಯಗಳಲ್ಲಿ ಲಯನ್ಸ್ ಕ್ಲಬ್ ಛಾಪನ್ನು ಮೂಡಿಸಿದೆ ಎಂದರು.

ರೇವಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ ಆಡಳಿತಾಧಿಕಾರಿ ಜಯದೇವ ಬಳಗಂಡಿ, ಲಯನ್ಸ್ ಪಿ.ಡಿ.ಜಿ. ಡಾ. ಗಿರೀಶ ಕುಚಿನಾಡ ಮಾತನಾಡಿದರು. ಲಯನ್ಸ್ ಕಾರ್ಯದರ್ಶಿ ಗಣೇಶ ನಾಯ್ಕ, ಸದಸ್ಯರಾದ ಎಚ್.ಎನ್. ನಾಯಕ, ದಿನೇಶ ನಾಯಕ, ಎಂ.ಕೆ. ಶ್ಯಾನಭಾಗ, ಮಂಗಳಾ ನಾಯಕ, ಎಂ.ಎಂ. ಹೆಗಡೆ, ಶಾಲೆಯ ಪೋಷಕ ಸಮಿತಿಯ ನಾರಾಯಣ ನಾಯ್ಕ ಇನ್ನಿತರರು ಇದ್ದರು. ಶಿಕ್ಷಕ ಕ್ರಿಸ್ತಾನಂದ ಪಿಸ್ಸೆ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಪ್ರಾರ್ಥಿಸಿದರು. ಶಿಕ್ಷಕ ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net