ಮನೆ ಬಾಗಿಲಿಗೆ ಆರೋಗ್ಯ ಸೇವೆ

MLK CHALANE 13
Published on

ಮೊಳಕಾಲ್ಮೂರು: ಗಣಿಬಾಧಿತ ಪ್ರದೇಶದ ಜನರ ಹಿತಕ್ಕಾಗಿ ಸಂಚಾರಿ ಆರೋಗ್ಯ ಸೇವೆ ಆರಂಭಿಸಲಾಗಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಆರೋಗ್ಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ರಾಂಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಚಾರಿ ಆರೋಗ್ಯ ಸೇವೆಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಜನರ ಆರೋಗ್ಯ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿನೂತನ ಸೇವೆ ತುಂಬಾ ಉಪಯುಕ್ತವಾಗಿದೆ. ಕಾಯಿಲೆಗೆ ತುತ್ತಾದವರು ದೂರದ ಆಸ್ಪತ್ರೆಗೆ ಬರುವ ಅಗತ್ಯವಿಲ್ಲ. ನಿಗದಿತ ದಿನದಂದು ತಮ್ಮೂರಿಗೆ ಸಂಚಾರಿ ವಾಹನ ಬರಲಿದ್ದು, ಅಂದು ಚಿಕಿತ್ಸೆ ಪಡೆಯಬಹುದು ಎಂದರು.

ಮನೆ ಬಾಗಲಲ್ಲೇ ಆರೋಗ್ಯ ಸೇವೆ ಲಭಿಸುವುದರಿಂದ ಸಮಯ, ಹಣ ಉಳಿತಾಯವಾಗಲಿದೆ. ಜತೆಗೆ ಕೆಲ ಗಂಭೀರ ಕಾಯಿಲೆಗೆ ತುತ್ತಾದವರಿಗೂ ಪ್ರಾಥಮಿಕ ಚಿಕಿತ್ಸೆ ದೊರೆಯಲಿದೆ. ಈ ಯೋಜನೆ ಕುರಿತು ಆರೋಗ್ಯ ಇಲಾಖೆ ಹೆಚ್ಚು ಜನಜಾಗೃತಿ ಮೂಡಿಸಿ, ಸೌಲಭ್ಯ ಗ್ರಾಮೀಣ ಪ್ರದೇಶದವರಿಗೆ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.

ಭರತ್‌ಕುಮಾರ, ಡಿ.ಫೆನ್ನಯ್ಯ, ಡಾ.ತಿಪ್ಪೇಸ್ವಾಮಿ, ಡಾ. ಮನೋಜ್, ಡಾ.ರಮೇಶ್, ಶ್ರೀಕಾಂತ್, ಡಾ. ಸುದರ್ಶನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net