ಆರೋಗ್ಯವಾಗಿರಲು ಯೋಗಾಭ್ಯಾಸ ಮಾಡಿ - ಆರ್ಟ್ ಆಪ್ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಸಲಹೆ

Shri Ravishankar Guruji 6x4
Published on

ಬಳ್ಳಾರಿ: ಜೀವನದಲ್ಲಿ ಏನೇ ಸಂಪಾದಿಸಿದರೂ ಆರೋಗ್ಯ ಗಳಿಸುವುದು ಕಷ್ಟ. ಪ್ರತಿದಿನ ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಹೇಳಿದರು.

ನಗರದ ಎಂಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಗುರುವಾರ ಆರ್ಟ್ ಆಫ್ ಲಿವಿಂಗ್ ಬಳ್ಳಾರಿ ತಂಡ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬಾರದು. ಹೊರ ವಿಭಾಗ ಚಿಕಿತ್ಸೆಗಳಿಗಿಂತ ಮನೆಯಲ್ಲಿ ಆಯುರ್ವೇದ ಚಿಕಿತ್ಸೆಗೆ ಆದ್ಯತೆ ನೀಡಿದರೆ ಬೇಗ ಗುಣಮುಖರಾಗಬಹುದು. ಪ್ರಮುಖವಾಗಿ ಸ್ಮಾರ್ಟ್ ಪೋನ್ ಬಳಕೆ ಕಡಿಮೆ ಮಾಡಬೇಕು. ಮೊಬೈಲ್‌ನ ವಾಟ್ಸ್ ಆ್ಯಪ್, ಫೇಸ್‌ಬುಕ್ ಸೇರಿ ವಿವಿಧ ಆ್ಯಪ್‌ಗಳಿಂದ ವಿದೇಶಿಗರಿಗೆ ವರಮಾನ ಹೋಗುತ್ತದೆ. ನಾವು ಬಳಸಿ ಅವರಿಗೆ ಅನುಕೂಲ ಮಾಡಿಕೊಡುವುದೇಕೆ?. ಅದಕ್ಕಾಗಿ ಇಂಡಿಯಾದಿಂದ ಬಿಡುಗಡೆ ಮಾಡಲಾಗಿರುವ ಎಲಿಮೆಂಟ್ಸ್ ಆ್ಯಪ್ ಬಳಸಿ ಎಂದು ಸಲಹೆ ನೀಡಿದರು. ಆರ್ಟ್ ಆಫ್ ಲಿವಿಂಗ್ ಡಿಡಿಸಿ ಮೆಂಬರ್ ಸುರೇಶ ಬಾಬು, ಶಿಕ್ಷಕಿಯರಾದ ಪುಷ್ಪಲತಾ, ವಿಪುಲ್, ಮಾಣಿಕ್, ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net