ಆರೋಗ್ಯ ಸಂಪತ್ತು ಶ್ರೇಷ್ಠ ಭಾಗ್ಯ

17Athni1
Published on

ಅಥಣಿ: ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯ. ಕನಿಷ್ಠ 6 ತಿಂಗಳಿಗೊಮ್ಮೆ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಪುರಾಥನೇಶ್ವರ ದೇವಾಲಯದ ಬಳಿ ಮುರುಂದ್ರ ಶಿವಯೋಗಿಗಳ 104ನೇ ಜಾತ್ರಾ ಮಹೋತ್ಸವ ನಿಮಿತ್ತ ರೋಟರಿ ಕ್ಲಬ್​ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬಿಪಿ, ಶುಗರ್​ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಈ ಕಲುಷಿತ ವಾತಾವರಣದಲ್ಲಿ ಆಹಾರ ಸೇವನೆಯಲ್ಲಿ ಜಾಗರೂಕವಾಗಿರಬೇಕು. ಯೋಗ, ವ್ಯಾಯಾಮ ಮತ್ತು ಸಂಗೀತ, ಸತ್ಸಂಗಗಳಲ್ಲಿ ಪಾಲ್ಗೊಂಡು ಚೈತನ್ಯದಿಂದಿರಬೇಕು. ರೋಟರಿ ಕ್ಲಬ್​ ಉಚಿತವಾಗಿ ಬಿಪಿ, ಶುಗರ್​ ಮತ್ತು ಸಾಮಾನ್ಯ ತಪಾಸಣೆ ಆಯೋಜಿಸಿರುವುದು ಶ್ಲಾನೀಯ. ಎಲ್ಲರೂ ಸದುಪಯೋಗ ಪಡೆಯಬೇಕು ಎಂದು ಆಶಿಸಿದರು.

ರೋಟರಿ ಕ್ಲಬ್​ ಸಂಸ್ಥಾಪಕ ಅಧ್ಯ ಗಜಾನನ ಮಂಗಸೂಳಿ ಮಾತನಾಡಿ, 25ವರ್ಷಗಳಿಂದ ವಿವಿಧ ರೀತಿಯಲ್ಲಿ ಸಮಾಜಮುಖಿ ಸೇವೆಯಲ್ಲಿ ರೋಟರಿ ಕ್ಲಬ್​ ತೊಡಗಿಕೊಂಡು ತಾಲೂಕಿನಾದ್ಯಂತ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮ ಯೋಜಿಸಿದ್ದೇವೆ. ಜಾತ್ರೆಯಲ್ಲಿ ವಿವಿಧ ಊರುಗಳಿಂದ ಬರುವ ಜನರಿಗ ಆರೋಗ್ಯ ತಪಾಸಣೆ ತುಂಬ ಅನುಕೂಲವಾಗಲಿದೆ ಎಂದರು.

ತವೆದ್ಯರಾದ ಡಾ.ಪಿ.ಪಿ. ಮಿರಜ ಮತ್ತು ಡಾ.ಆನಂದ ಗುಂಜಿಗಾವಿ ತಪಾಸಣೆ ಕೆಗೊಂಡರು. ರೋಟರಿ ಕ್ಲಬ್​ ಸ್ಥಳಿಯ ಅಧ್ಯ ಅರುಣ ಸೌದಾಗರ, ಸದಸ್ಯರಾದ ಅರುಣ ಯಲಗುದ್ರಿ, ಅನಿಲ ದೇಶಪಾಂಡೆ, ಶಿವಾನಂದ ದಿವಾನಮಳ, ಸಚಿನ ದೇಸಾಯಿ, ಶ್ರೀಕಾಂತ ಅಥಣಿ, ಶೇಖರ ಕೋಲಾರ, ಸುರೇಶ ಬಳೊಳ್ಳಿ,ಭರತ ಸೋಮಯ್ಯ, ಮೇರಾಜ ಪರಮಾರ, ಬಾಳಪ್ಪ ಬುಕಿಟಗಾರ, ಸೋಮು ವಾಂಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net