ಅಮೃತ ಅಭಿಯಾನ ಯೋಜನೆಯಡಿ ಈಗಾಗಲೇ ಪ್ರತಿ ಗ್ರಾಪಂಗೆ ಕಿಟ್‌ಗಳನ್ನು ಒದಗಿಸಲಾಗಿದೆ. ಈ ಕಿಟ್‌ನಲ್ಲಿ 11 ಸಾಮಗ್ರಿ ಇರುತ್ತವೆ. ಮುಖ್ಯವಾಗಿ ಬಿಪಿ, ಷುಗರ್ ಇತರೆ ಆರೋಗ್ಯ ತಪಾಸಣೆ ಮಾಡುವ ಉಪಕರಣಗಳನ್ನು ನೀಡಲಾಗಿದೆ. ಆರೋಗ್ಯಕರ ಉಪಕರಣಗಳನ್ನು ಬಳಸಿ ಜನರ ಆರೋಗ್ಯ ಸುಧಾರಣೆ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕಾಯಿಲೆಗಳು ಬರದಂತೆ ಜಾಗೃತಿ ವಹಿಸುವುದು. ಕಾಯಿಲೆಗಳು ಯಾವುದರಿಂದ ಬರುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಆರೋಗ್ಯಯುತ ಆಹಾರ, ಮನೆ ಅಡುಗೆ ಸೇವನೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.