ವ್ಯಾಯಾಮ,ಯೋಗದಿಂದ ಆರೋಗ್ಯ

40203640-110e-4e93-8b95-8a78c85e9b1b-08
Published on

ಚಿತ್ರದುರ್ಗ ವ್ಯಾಯಾಮ ಮತ್ತು ಯೋಗ ಸಕ್ಕರೆ ಕಾಯಿಲೆ ಸಹಿತ ಅನೇಕ ರೋಗಗಳಿಂದ ದೂರವಿರಬಹುದಾಗಿ ಧಾರವಾಡದ ವೀರನಾರಾಯಣ ಕುಲಕುರ್ಣಿ ಹೇಳಿದರು.

ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆ ಸೈಕಲ್ ಯಾತ್ರೆ ನಡೆಸುತ್ತಿರು ವ ಇವರು,ಚಿತ್ರದುರ್ಗದ ರೋಟರಿ ಬಾಲಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ,ದೇಹಕ್ಕೆ ಪೂರಕ ಆಹಾರ ಸೇವನೆ ಬದಲು ನಾಲಿಗೆ ರುಚಿಗೆ ಮನಸೋಲುತ್ತಿರುವುದು ಅನಾರೋಗ್ಯಕ್ಕೆ ಕಾರಣವಾಗಿದೆ.

ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದ್ದು,ಜನರಲ್ಲಿ ಜಾಗೃತಿ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದೇನೆ. ಅಂದಾಜು 4000 ಕಿ.ಮೀ.ದೂರದ ಈ ಯಾತ್ರೆಯಲ್ಲಿ ಈಗಾಗಲೇ 3200 ಕಿ.ಮೀ ದೂರವನ್ನು ಕ್ರಮಿಸಿದ್ದೇನೆ ಎಂದರು. ಶ್ರೀಮತಿ ಪೂರ್ಣಿಮಾ ಕುಲಕರ್ಣಿ,ಪುತ್ರಿ ಅಮೋದಿನಿ ಹಾಗೂ ಸ್ನೇಹಿತ ಪೃಥ್ವಿಸಾಥ್ ತಮ್ಮೊಂದಿಗೆ ಸಾಥ್ ನೀಡಿದ್ದಾರೆ ಎಂದರು.

ರೋಟೇರಿಯನ್‌ಗಳಾದ ಕೆ.ಮಧುಪ್ರಸಾದ್,ಎಸ್.ವೀರೇಶ್,ಎ,ಮೈಲೇಶ್‌ಕುಮಾರ್,ವೀರಭದ್ರಸ್ವಾಮಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net