ಆರೋಗ್ಯಯುತ ಜೀವನಕ್ಕೆ ಕ್ರೀಡೆಗಳು ಅವಶ್ಯ

Health, Sports, MLA, Rajugowda Patila Kudarisalawadagi, Volleyball Tournament, Devahipparagi
ಮಣೂರ ಗ್ರಾಮದ ಕೆಎಸ್‌ಎಲ್‌ಎ ಪ್ರೌಢಶಾಲೆಯಲ್ಲಿ ಪ್ರಾಥಮಿಕ- ಪ್ರೌಢಶಾಲೆಗಳ ವಾಲಿಬಾಲ್ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು. ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ, ಮರುಳಾರಾಧ್ಯ ಶ್ರೀಗಳು, ಎಂ.ಬಿ.ಯಡ್ರಾಮಿ, ಎಲ್.ಆರ್.ಅಂಗಡಿ ಇತರರಿದ್ದರು.
Published on

ದೇವರಹಿಪ್ಪರಗಿ: ಮಕ್ಕಳಲ್ಲಿ ಸದೃಢ ದೇಹ, ಶಾಂತಿ, ಸ್ಥಿರ ಮನಸ್ಸು ನೆಲೆಗೊಳ್ಳಲು ಕ್ರೀಡೆಗಳು ಅಗತ್ಯವಾಗಿವೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ತಾಲೂಕಿನ ಮಣೂರ ಗ್ರಾಮದ ಕೆಎಸ್‌ಎಲ್‌ಎ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವ್ಹಾಲಿಬಾಲ್ ಪಂದ್ಯಾವಳಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ರೀಡಾಚಟುವಟಿಕೆಗಳಿಂದ ನಮಗೆ ಆರೋಗ್ಯ ಭಾಗ್ಯ ದೊರೆಯಬಲ್ಲದು. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳತ್ತಲೂ ಗಮನ ಹರಿಸಬೇಕು ಎಂದರು.

ದೇವೂರ ಹಿರೇಮಠದ ಮರುಳಾರಾಧ್ಯ ಶ್ರೀಗಳು ಮಾತನಾಡಿ, ಮಕ್ಕಳ ಶೈಕ್ಷಣಿಕ ಹಾಗೂ ದೈನಂದಿನ ಜೀವನ ಸುಗಮವಾಗಿ ಸಾಗಲು ಕ್ರೀಡೆಗಳು ಅವಶ್ಯವಾಗಿವೆ. ಕ್ರೀಡೆಗಳಲ್ಲಿ ಸೋಲು- ಗೆಲುವು ಸಾಮಾನ್ಯವಾಗಿದ್ದು, ಅವುಗಳಲ್ಲಿ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿದೆ ಎಂದರು.

ಪಂದ್ಯಾವಳಿಯಲ್ಲಿ ಮಣೂರ ಗ್ರಾಮದ ಕೆಎಸ್‌ಎಲ್‌ಎ ಪ್ರೌಢಶಾಲೆ ಬಾಲಕರು ಹಾಗೂ ಇಂಡಿ ತಾಲೂಕಿನ ಲಚ್ಯಾಣದ ಜಿಎಚ್‌ಎಸ್ ಬಾಲಕಿಯರು ಪ್ರಥಮ ಸ್ಥಾನ ಪಡೆದರು. ಪ್ರಾಥಮಿಕ ಶಾಲಾಮಟ್ಟದಲ್ಲಿ ಇಂಡಿ ಎಂಡಿಆರ್‌ಎಸ್ ಬಾಲಕರು ಹಾಗೂ ಆಲಮಟ್ಟಿ ಡ್ಯಾಸೈಟಿನ್ ಶಾರದಾ ಕನ್ನಡ ಪ್ರಾಥಮಿಕ ಶಾಲೆಯ ಬಾಲಕಿಯರು ಪ್ರಥಮ ಸ್ಥಾನ ಪಡೆದರು.

ಸಿಂದಗಿ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ, ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಲ್.ಆರ್.ಅಂಗಡಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಾಮದೇವ ಚವ್ಹಾಣ, ಮುಖ್ಯಶಿಕ್ಷಕ ಎಸ್.ಸಿ.ಕಿತ್ತೂರ, ದೈಹಿಕ ಶಿಕ್ಷಕ ಎಸ್.ಡಿ.ಆನೆಗುಂದಿ, ಶಿಕ್ಷಕರಾದ ಪ್ರಕಾಶ ನಾಯಿಕ, ಎಂ.ಜಿ.ಸಜ್ಜನ, ಆರ್.ಯು.ಜಾಧವ, ಡಿ.ಜಿ.ಜಾಡರ ಹಾಗೂ ದೈಹಿಕ ಶಿಕ್ಷಕರು, ಕ್ರೀಡಾಳುಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net