ದುಡಿಮೆಯೊಂದಿಗೆ ಆರೋಗ್ಯಕ್ಕೂ ಮಹತ್ವ ನೀಡಲಿ: ಯಶಂತಕುಮಾರ

11 Jaggu 3
ಹುಲ್ಯಾನೂರ ಗ್ರಾಮದ ಹೊಸಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಯಶಂತಕುಮಾರ ಮಾತನಾಡಿದರು. ಗೋಪಾಲ ಗೂಡಸಿ, ಮುರುಗೇಶ ಯಕ್ಕಂಚ್ಚಿ ಇತರರಿದ್ದರು.
Published on

ಬೆಳಗಾವಿ: ದುಡಿಮೆ ಜತೆಗೆ ಕೂಲಿ ಕಾರ್ಮಿಕರರು ಆರೋಗ್ಯ ಸಂರಕ್ಷಣೆಗೂ ಮಹತ್ವ ನೀಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶಂತಕುಮಾರ ಹೇಳಿದರು. ತಾಲೂಕಿನ ಕಲಖಾಂಬ ಗ್ರಾಪಂ ವ್ಯಾಪ್ತಿಯ ಹುಲ್ಯಾನೂರ ಗ್ರಾಮದ ಹೊಸಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಜಿಪಂ, ತಾಪಂ, ಗ್ರಾ ಪಂ ಹಾಗೂ ಆರೋಗ್ಯ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ದೇಶಿಸಿ ಅವರು ಮಾತನಾಡಿ, ಕಾರ್ಮಿಕರಿಗೆ ಕುಟುಂಬದ ಜವಾಬ್ದಾರಿ ಹೆಚ್ಚಿರುತ್ತದೆ. ದುಡಿಮೆಯ ಸ್ವಲ್ಪ ಹಣ ಆರೋಗ್ಯ ಕಾಪಾಡಿಕೊಳ್ಳಲು ಖರ್ಚು ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಯಕ್ಕೆ ಸರಿಯಾಗಿ ಊಟೋಪಚಾರ ಮಾಡಿಕೊಂಡು ಉತ್ತಮ ಆರೋಗ್ಯವಂತರಾಗಿ ಬಾಳಬೇಕು. ನೀರನ್ನು ಕಾಯಿಸಿ, ಆರಿಸಿ ಕುಡಿಯಬೇಕು. ಇದರಿಂದ ಜ್ವರ, ಕೆಮ್ಮು ಹಾಗೂ ಶೀತಗಳಂತಹ ರೋಗಗಳು ಬರುವುದಿಲ್ಲ. ಜತೆಗೆ ಹಣ್ಣು ತರಕಾರಿಗಳನ್ನು ಹೆಚ್ಚು ಬಳಸಬೇಕು ಎಂದು ವಿವರಿಸಿದರು. ಪಿಡಿಒ ಗೋಪಾಲ ಗೂಡಸಿ, ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚ್ಚಿ, ಐಇಸಿ ಸಂಯೋಜಕ ರಮೇಶ ಮಾದರ, ಕಾಯಕ ಮಿತ್ರರು, ಬಿಎಫ್​ಟಿ, ಗ್ರಾಪಂ ಮತ್ತು ವೈದ್ಯಕಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net