

ಚನ್ನಗಿರಿ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಯುವ ಸಮೂಹಕ್ಕೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ತಣಿಗೆರೆ ಗ್ರಾಪಂ ಅಧ್ಯಕ್ಷ ವಿಕ್ರಂ ಪಾಟೀಲ್ ತಿಳಿಸಿದರು.
ತಾಲೂಕಿನ ತಣಿಗೆರೆ ಗ್ರಾಮದ ಆಂಜನೇಯ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಏರ್ಪಡಿಸಿದ್ದ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
1991ರಲ್ಲಿ ರಾಜ್ಯದಲ್ಲಿ ಮದ್ಯಪಾನಿಗಳನ್ನು ಗುರುತಿಸಿ, ಅವರಿಗೆ ವೇದಿಕೆ ಮೂಲಕ ಶಿಬಿರ ನಡೆಸಿ ಲಕ್ಷಾಂತರ ಜನರ ಕುಡಿತ ಬಿಡಿಸಿ ನವಜೀವನ ಕಟ್ಟಿಕೊಳ್ಳುವಂತೆ ಮಾಡಿದೆ. ಯಾವುದೇ ಮದ್ದು ಮಾತ್ರೆಗಳಿಲ್ಲದೇ ಕೇವಲ ಪಾಠ ಪ್ರವಚನಗಳ ಮೂಲಕ ಮನಪರಿವರ್ತನೆ ಮಾಡಿ ಮತ್ತೆ ಕುಟುಂಬಕ್ಕೆ ಬೆಳಕು ನೀಡಿದ ಏಕೈಕ ಸಂಸ್ಥೆ ಧರ್ಮಸ್ಥಳ ಸಂಸ್ಥೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲೇಶ್, ಮುಖ್ಯಶಿಕ್ಷಕ ಎ.ಎಂ. ರುದ್ರಯ್ಯ, ಮೇಲ್ವಿಚಾರಕ ಸಂತೋಷ್, ಆನಂದಪ್ಪ, ಗೀತಾ, ಓಬಳೇಶ್ ಇದ್ದರು.